ಚರಗ ಚೆಲ್ಲಲು ಅಡ್ಡಿಯಾದ ಸೊಟ್ಟ ಹಳ್ಳ!

Sotta pit that is an obstacle to spilling the charga!
Published on

ಕುಂದಗೋಳ: ತಾಲೂಕಿನಾದ್ಯಂತ ಹೊಲಕ್ಕೆ ತೆರಳಿ ಶೀಗೆ ಹುಣ್ಣಿಮೆ ಸಡಗರ ಸಂಭ್ರಮದಿಂದ ಆಚರಿಸಬೇಕಾದ ಜನತೆ ಮಳೆರಾಯನ ಕಾಟದಿಂದ ಮನೆಯಲ್ಲಿಯೇ ಉಳಿಯುವಂತಾಯಿತು.

ರೈತರು ಟ್ರ್ಯಾಕ್ಟರ್, ಎತ್ತು-ಚಕ್ಕಡಿಗಳಲ್ಲಿ ಕುಟುಂಬ ಸಮೇತ ಜಮೀನುಗಳಿಗೆ ತೆರಳಿ ಪೈರು, ಭೂಮಿ ಹಾಗೂ ಪಂಚ ಪಾಂಡವರಿಗೆ ಪೂಜೆ ಸಲ್ಲಿಸಿ, ನಂತರ ಚರಗ ಚೆಲ್ಲುತ್ತಿದ್ದರು. ಆದರೆ, ಬೆಳಗ್ಗೆಯಿಂದಲೇ ಮಳೆ ಸತತವಾಗಿ ಸುರಿದ ಪರಿಣಾಮ ರೈತ ಕುಟುಂಬದವರು ಹೊಲಕ್ಕೆ ತೆರಳದಂತಾಗಿತ್ತು. ಹೀಗಾಗಿ, ಮನೆ ಸದಸ್ಯರೊಬ್ಬರೇ ಹೊಲಕ್ಕೆ ಹೋಗಿ ಪೂಜೆ ಮಾಡಿಕೊಂಡ ಬಂದರು. ಇತರರು ಮನೆಯಲ್ಲಿ ಊಟ ಮಾಡಿ ಹುಣ್ಣಿಮೆ ಆಚರಿಸಿದರು.

ತಾಲೂಕಿನ ಹಿರೇಹರಕುಣಿ ಗ್ರಾಮದ ಬಳಿಯ ಸೊಟ್ಟ ಹಳ್ಳ ತುಂಬಿ ಹರಿಯಿತು. ಪರಿಣಾಮ ಹಳ್ಳದ ಆಚೆ ಜಮೀನು ಇರುವ ರೈತರು ಶೀಗೆ ಹುಣ್ಣಿಮೆ ಚರಗ ಚೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ, ಹೊಲಕ್ಕೆ ಹೋಗಲು ಬಂದಿದ್ದ ರೈತರು, ಹಳ್ಳದ ದಂಡೆಯಲ್ಲಿ ನೀರಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಮನೆಗೆ ಮರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net