

ಚನ್ನಮ್ಮನ ಕಿತ್ತೂರು: ವಚನ ಸಾಹಿತ್ಯ ನಮ್ಮ ಧರ್ಮ ಗ್ರಂಥ. ಅದಕ್ಕೆ ಧಕ್ಕೆ ಮಾಡಿದರೆ ಸುಮ್ಮನೆ ಬಿಡುವ ಮಾತಿಲ್ಲ ಎಂದು ರಾಷ್ಟ್ರೀಯ ಬಸವದಳ ಪ್ರಧಾನ ಕಾರ್ಯದರ್ಶಿ ವೀರೇಶ ಹಲ್ಕಿ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಬಸವಪರ ಸಂಟನೆಗಳ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜು. 16ರಂದು ಪ್ರತಿಭಟನಾ ರ್ಯಾಲಿಯಲ್ಲಿ ಬಿಜೆಪಿ ಮುಖಂಡ ಸಂದೀಪ ದೇಶಪಾಂಡೆ ಬಸವಣ್ಣನವರ ವಚನಗಳನ್ನು ತಿರುಚಿ ಅವಮಾನ ಮಾಡಿದ್ದಾರೆ. ಈ ಕುರಿತು ಅವರು ಕ್ಷಮೆ ಕೇಳಬೇಕು ಇಲ್ಲದಿದ್ದರೆ ಜು. 21ರಂದು ಪಟ್ಟಣದಲ್ಲಿ ಪ್ರತಿಭಟಿಸಿ, ದೂರು ದಾಖಲಿಸಲಾಗುವುದು ಎಂದರು.
ಲಿಂಗಾಯತ ಧರ್ಮ ಮಹಾಸಭಾ ತಾಲೂಕು ಟಕದ ಅಧ್ಯ ಬಸವರಾಜ ಕಡೆಮನಿ ಮಾತನಾಡಿ, ಉದ್ದೇಶಪೂರ್ವಕವಾಗಿ ಶರಣರ ವಚನಗಳನ್ನು ವ್ಯಂಗ್ಯವಾಡುವುದು, ಯಾವುದಕ್ಕೊ ಹೋಲಿಕೆ ಮಾಡಿ ಭಾಷಣದಲ್ಲಿ ಬಳಸಿದರೆ ಸಹಿಸುವುದಿಲ್ಲ ಎಂದರು.
ಸುಧೀರ್ ವಾಲಿ, ಮಡಿವಾಳಪ್ಪ ಕೋಟಿ, ಶಿವಾನಂದ ಅಗಿಸಿಮನಿ, ಅಶೋಕ ಅಳ್ನಾವರ, ಮಡಿವಾಳಪ್ಪ ಅಸುಂಡಿ, ನಿಂಗರಾಜ ಕುಗಟಿ, ಉಮೇಶ ಹುಂಬಿ, ನಾಗರಾಜ ಮಿರಜಗಿ, ಗಂಗಪ್ಪ ಲೋಕೂರ ಇತರರಿದ್ದರು.