ಸ್ಸಾರಿ ಕೇಳಿದ ಸಿಎಂ ಸಿದ್ದು

Siddaramayya vvani
Published on

ಹುಬ್ಬಳ್ಳಿ: ನಿರಂಜನ್ ವೆರಿ ಸ್ಸಾರಿ, ನಾವು ನಿಮ್ಮ ಪರವಾಗಿ ಇರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಬೈಲ್ ಫೋನ್ ಮೂಲಕ ಮಾತನಾಡಿ ನೇಹಾ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಅಭಯ ನೀಡಿದರು.
ಸಚಿವ ಎಚ್.ಕೆ. ಪಾಟೀಲ ಅವರು ಮೃತ ನೇಹಾಳ ಮನೆಗೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿಗೆ ಕರೆ ಮಾಡಿದರು. ಈ ವೇಳೆ ಮಾತನಾಡಿದ ಸಿಎಂ, ವಿಶೇಷ ಕೋರ್ಟ್ ಮಾಡಲು ತೀರ್ಮಾನಿಸಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಆದಷ್ಟು ಬೇಗ ನ್ಯಾಯ ಕೊಡಿಸುವೆ ಎಂದು ವಾಗ್ದಾನ ಮಾಡಿದರು. ಇದಕ್ಕೆ ನಿರಂಜನಯ್ಯ ಅವರು ಸಿಎಂಗೆ ಧನ್ಯವಾದ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net