ಚುನಾವಣಾ ಆಯೋಗಕ್ಕೆ ಅಫಿಡವಿಟ್ ಕೊಡುವ ಅಗತ್ಯವಿಲ್ಲ

sorake
Published on

ಮಡಿಕೇರಿ:

ಮತಗಳ್ಳತನ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಸಂಬAಧಿಸಿದAತೆ ಚುನಾವಣಾ ಆಯೋಗಕ್ಕೆ ಅಫಿಡಾವಿಟ್ ಕೊಡುವ ಅಗತ್ಯ ಇಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದರು.

ರಾಹುಲ್ ಗಾಂಧಿ ಸಂವಿಧಾನಾತ್ಮಕವಾಗಿ ಪ್ರಮಾಣ ವಚನ ಸ್ವೀಕರಿಸಿರುವ ವಿರೋಧ ಪಕ್ಷದ ನಾಯಕ. ಅವರು ಛಾಯಾ ಪ್ರಧಾನಿ ಇದ್ದಂತೆ. ಚುನಾವಣಾ ಆಯೋಗದಿಂದ ನಡೆದಿರುವ ತಪ್ಪುಗಳನ್ನು ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ. ಚುನಾವಣಾ ಆಯೋಗ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಬೇಕು ಎಂದು ಬುಧವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಹುಲ್ ಗಾಂಧಿ ಮತಗಳ್ಳತನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚುವರಿ ಮತಗಳಿರುವ ಮಾಹಿತಿ ನಮಗೆ ಮೊದಲೇ ಇತ್ತು. ಮಹದೇವಪುರ ಒಂದು ಕ್ಷೇತ್ರದಲ್ಲೇ 1 ಲಕ್ಷ ಹೆಚ್ಚುವರಿ ಮತ ಇದೆ. ಇದು ಇಲ್ಲದಿದ್ದರೆ ಎಂ.ಪಿ. ಸ್ಥಾನ ಕಾಂಗ್ರೆಸ್ ಗೆಲ್ಲುತ್ತಿತ್ತು. ಮಹಾರಾಷ್ಟçದಲ್ಲಿ ಸಂಸತ್ ಚುನಾವಣೆ ವೇಳೆ 41 ಲಕ್ಷ ಮತ ಹೆಚ್ಚಾಗಿದೆ. ಬಿಹಾರದಲ್ಲಿ ಮತದಾರರನ್ನು ತೆಗೆದುಹಾಕಲಾಗಿದೆ. ಇದರ ವಿರುದ್ಧ ಎಐಸಿಸಿ ಆಂದೋಲನ ಶುರುಮಾಡಿದೆ. ಚುನಾವಣಾ ಆಯೋಗ ಒಂದು ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಇದರ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ ಕೆಪಿಸಿಸಿ ಪ್ರಚಾರ ಸಮಿತಿಯಿಂದ ನಡೆಯುತ್ತದೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ನೇಮಕ ಆದ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಸಮಿತಿಯನ್ನು ಬೂತ್ ಮಟ್ಟದಿಂದಲೇ ಸದೃಢೊಳಿಸುವ ಗುರಿ ಹೊಂದಲಾಗಿದೆ. ಚುನಾವಣೆ ಸಂದರ್ಭ ಮಾತ್ರ ಪ್ರಚಾರ ನಡೆಸುವುದು ಪ್ರಚಾರ ಸಮಿತಿ ಕೆಲಸ ಅಲ್ಲ. ಪಕ್ಷದ ಸಂಘಟನೆ ಬಲಪಡಿಸುವಲ್ಲೂ ಪ್ರಚಾರ ಸಮಿತಿಯ ಪಾತ್ರ ದೊಡ್ಡದಿದೆ.

ಕಾಂಗ್ರೆಸ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೀವನಮಟ್ಟ ಸುಧಾರಣೆ ಕಂಡಿದೆ. ಚುನಾವಣೆ ಸಂದರ್ಭ ಕೊಟ್ಟ ಆಶ್ವಾಸನೆ 6 ತಿಂಗಳಲ್ಲೇ ಸರ್ಕಾರ ಈಡೇರಿಸಿದೆ. 1 ಲಕ್ಷ ಕೋಟಿ ರೂ. ಜನರ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತಿದೆ. ಈ ಮೂಲಕ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ನಂ. 1 ಸ್ಥಾನದಲ್ಲಿದೆ. ಇದನ್ನು ಜನರಿಗೆ ತಲುಪಿಸುವ ಮಹತ್ವದ ಹೊಣೆಗಾರಿಕೆ ಪ್ರಚಾರ ಸಮಿತಿ ಮೇಲಿದೆ. ಪಕ್ಷದ ನಾಯಕತ್ವ, ಸಿದ್ಧಾಂತ, ಕೆಲಸ ಗ್ರಾಮೀಣ ಮಟ್ಟಕ್ಕೂ ತಲುಪಬೇಕು. ಈ ಸಂಬAಧ ಜಿಲ್ಲಾ ಮಟ್ಟದಲ್ಲೂ ಕಾರ್ಯಗಾರ ನಡೆಸುವ ಚಿಂತನೆ ಇದೆ. 1 ಲಕ್ಷ ಕಾರ್ಯಕರ್ತರನ್ನು ಪ್ರಚಾರ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಎನ್ನುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಹೇಳಿದ್ದವರು ಬೇರೆ ರಾಜ್ಯಗಳಲ್ಲಿ ಜಾರಿಗೆ ತಂದಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸೊರಕೆ ಬಿಜೆಪಿ ಒಳಗಿನ ಗೊಂದಲವೇ ಧರ್ಮಸ್ಥಳ ಪ್ರಕರಣಕ್ಕೆ ಕಾರಣವಾಗಿದೆ. ಅಲ್ಲಿ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ತನಿಖೆ ಪರಿಣಾಮಕಾರಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ತನಿಖೆ ಆಗುತ್ತಿದೆ. 13 ಹೊಂಡ ತೆಗೆಯುವ ಸಂದರ್ಭ ಬಿಜೆಪಿ ಯಾಕೆ ಮಾತಾಡಿಲ್ಲ? ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣವರ್ ಯಾವ ಪಕ್ಷ ? ಎಂದು ಪ್ರಶ್ನಿಸಿದರು.

ಮಾಜಿ ಸಚಿವ ರಾಜಣ್ಣ ಬಿಜೆಪಿ ಸೇರುತ್ತಾರೆ ಎನ್ನುವ ವಿಷಯಕ್ಕೆ ಪ್ರತಿಕ್ರಿಯೆ ನೀಡಿ, ರಾಜಣ್ಣ ಬಹಳ ವರ್ಷಗಳಿಂದ ನನಗೆ ಗೊತ್ತಿದೆ. ಅವರು ಸಿದ್ದಾಂತದ ಮೇಲೆ ಮುಂದೆ ಬಂದ ವ್ಯಕ್ತಿ. ಬೇರೆ ಸಿದ್ದಾಂತಕ್ಕೆ ಕೈ ಹಾಕುವುದಿಲ್ಲ ಎನ್ನುವ ನಂಬಿಕೆ ಇದೆ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಜೆ. ಆರ್. ಲೋಬೋ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ಪ್ರಮುಖರಾದ ಫಾರೂಕ್, ಮುನೀರ್, ಹಂಸ, ಮುನೀರ್ ಅಹಮ್ಮದ್ ಮತ್ತಿತರರು ಇದ್ದರು. ಸುದ್ದಿಗೋಷ್ಠಿ ನಂತರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net