ಸೊರಬ: ನ್ಯಾರ್ಸಿ, ಉದ್ರಿಯಲ್ಲಿ ಬಿಜೆಪಿ ಬೆಂಬಲಿತರ ಗೆಲುವು

9sor3
ನ್ಯಾರ್ಸಿ ಗ್ರಾಪಂ ಅಧ್ಯಕ್ಷ ಧನಂಜಯ ನಾಯ್ಕ, ಕಾಮಾಕ್ಷಿ ಅಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ್ ತಲಕಾಲಕೊಪ್ಪ, ಪ್ರಸನ್ನ ಶೇಟ್, ಶಿವಕುಮಾರ್ ಕಡಸೂರು ಸದಸ್ಯರು ಇದ್ದರು.
Published on

ಸೊರಬ: ಚಂದ್ರಗುತ್ತಿ ಹೋಬಳಿಯ ನ್ಯಾರ್ಸಿ ಗ್ರಾಪಂ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಧನಂಜಯ ನಾಯ್ಕ, ಉಪಾಧ್ಯಕ್ಷರಾಗಿ ಕಾಮಾಕ್ಷಿ ಅಣ್ಣಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

8 ಸದಸ್ಯ ಬಲದ ಪಂಚಾಯಿತಿಯಲ್ಲಿ 6 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ದಂಡಾವತಿ ಜಲಾನಯನ ಯೋಜನೆಯ ವಿಭಾಗದ ಸಹಾಯಕ ಅಭಿಯಂತ ಸಂಪತ್‌ಕುಮಾರ್ ಕಾರ್ಯನಿರ್ವಹಿಸಿದರು. ಪಿಡಿಒ ಸುದರ್ಶನ್ ಸಹಕರಿಸಿದರು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಚಂದ್ರಗುತ್ತಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜು ಕೆಂಚಿಕೊಪ್ಪ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೇಟ್ ಮುಖಂಡರಾದ ಈಶ್ವರ ಚನ್ನಪಟ್ಟಣ, ಪರಮೇಶ್ ಮಣ್ಣತ್ತಿ, ರಾಜು ಮಾವಿನಬಳ್ಳಿಕೊಪ್ಪ, ಎಂ.ಕೆ.ದೇವರಾಜ, ಗ್ರಾಪಂ ಸದಸ್ಯರಾದ ಗಣೇಶ್, ಸೀತಾರಾಮ, ಕವಿತಾ, ನಾಗಮ್ಮ ಇತರರಿದ್ದರು.
ಉದ್ರಿ ಗ್ರಾಪಂ: ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲಕ್ಷಮ್ಮ, ತಾರಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಎಸ್ಟಿ ಮಹಿಳೆ, ಸಾಮಾನ್ಯ ಮಹಿಳೆಗೆ ಅಧಿಕಾರ ಮೀಸಲಾಗಿತ್ತು. ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಕಾರ್ಯನಿರ್ವಹಿಸಿದರು. ಪಿಡಿಒ ಹೋಮೇಶ್ ಸಹರಿಸಿದರು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಂಚಾಯ್ತಿಯ ಎಲ್ಲಾ 17 ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net