

ಸೊರಬ: ತಾಲೂಕಿನ ಚಂದ್ರಗುತ್ತಿ ಹೋಬಳಿಯ ಬೆನ್ನೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶಿಲ್ಪಾರವಿ, ಉಪಾಧ್ಯಕ್ಷರಾಗಿ ಎ.ಮಂಜುನಾಥ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಬಿಸಿಎಂಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 9 ಸದಸ್ಯರ ಬಲದ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರು ಬಿಜೆಪಿ ಬೆಂಬಲಿತರು. ಅಧ್ಯಕ್ಷ ಸ್ಥಾನಕ್ಕೆ ಹೊಂದಾಣಿಕೆ ಇಲ್ಲದ ಹಿನ್ನೆಲೆಯಲ್ಲಿ ಚಂದ್ರಕಲಾ ಹಾಗೂ ಶಿಲ್ಪಾರವಿ, ಉಪಾಧ್ಯಕ್ಷ ಸ್ಥಾನಕ್ಕೆ ಎ.ಮಂಜುನಾಥ ನಾಮಪತ್ರ ಸಲ್ಲಿಸಿದ್ದರು. ಆದರೆ ಚಂದ್ರಕಲಾ ಚುನಾವಣೆ ಉದ್ದೇಶಕ್ಕೆ ನೀಡಿರುವ ಜಾತಿ ಪ್ರಮಾಣಪತ್ರ ಒದಗಿಸದೆ ಇರುವ ಕಾರಣ ನಾಮಪತ್ರವನ್ನು ತಿರಸ್ಕರಿಸಲಾಯಿತು. ಅಂತಿಮವಾಗಿ ಕಣದಲ್ಲಿ ಒಬ್ಬರೇ ಇದ್ದ ಕಾರಣ ಶಿಲ್ಪಾ ರವಿ ಆಯ್ಕೆ ಘೋಷಿಸಲಾಯಿತು.
ಚುನಾವಣಾಧಿಕಾರಿಯಾಗಿ ದಂಡಾವತಿ ಜಲಾನಯನ ಯೋಜನೆಯ ವಿಭಾಗದ ಎಇ ಸಂಪತ್‌ಕುಮಾರ್ ಕಾರ್ಯನಿರ್ವಹಿಸಿದರು. ಪಿಡಿಒ ಕೃಷ್ಣಪ್ಪ ಹಾಗೂ ಕಾರ್ಯದರ್ಶಿ ಶ್ರೀಧರ್ ಸಹಕರಿಸಿದರು. ಲಿತಾಂಶ ಹೊರ ಬರುತ್ತಿದ್ದಂತೆ ಬಿಜೆಪಿ ಕಾ0ರ್ುಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಚಂದ್ರಗುತ್ತಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜು ಕೆಂಚಿಕೊಪ್ಪ, ಮುಖಂಡರಾದ ಡಾ. ಜ್ಞಾನೇಶ್ ಕೊಡಕಣಿ, ಮಾಜಿ ಜಿಪಂ ಸದಸ್ಯ ಗುರುಕುಮಾರ ಪಾಟೀಲ್, ಈಶ್ವರ ಚನ್ನಪಟ್ಟಣ, ಪರಮೇಶ್ ಮಣ್ಣತ್ತಿ, ಸುರೇಶ್ ಉದ್ರಿ, ಗ್ರಾಪಂ ಸದಸ್ಯರಾದ ಎಂ.ಕೆ.ರಾಧಮ್ಮ, ದೇವರಾಜ, ಯಶೋದಾ, ಎಸ್.ವಿನಾಯಕ್, ಈರಮ್ಮ, ಸಣ್ಣಪ್ಪ ಇತರರಿದ್ದರು.