

ಸೊರಬ: ತಾಲೂಕಿನ ಹಂಚಿ ಗ್ರಾಪಂ ಅಧ್ಯಕ್ಷರಾಗಿ ಮಮತಾ ಹಾಗೂ ಉಪಾಧ್ಯಕ್ಷರಾಗಿ ಯೋಗೇಶ್ ನಾಯ್ಕ ಆಯ್ಕೆಯಾದರು.
ಮಮತಾ 7 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಲೀಲಾವತಿ 6 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದ ಶಾಂತವ್ವ ಭಜಂತ್ರಿ 5 ಮತಗಳನ್ನು ಮಾತ್ರ ಪಡೆದರೆ, 8 ಮತ ಗಳಿಸಿದ ಯೋಗೇಶ್ ನಾಯ್ಕ ಚುನಾಯಿತರಾದರು. ಕೃಷಿ ಅಧಿಕಾರಿ ನೇಮಚಂದ್ರ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಿಡಿಒ ರವಿಕುಮಾರ ಸಹಕರಿಸಿದರು.