

ಸೊರಬ: ತಾಲೂಕಿನ ಜಡೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಮಿತ್ ಗೌಡ, ಲಕ್ಷಮ್ಮ ಆಯ್ಕೆಯಾದರು.
17 ಸದಸ್ಯ ಬಲವುಳ್ಳ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ ಗೌಡ ನಾಮಪತ್ರ ಹಿಂಪಡೆದರು. ನಂತರ ಚುನಾವಣೆಯಲ್ಲಿ ಅಮಿತ್ ಗೌಡ 12, ಎಸ್.ರಾಜು 5 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮಮ್ಮ 13 ಮತ ಪಡೆದರೆ, ಎಸ್.ಕೆಂಚಮ್ಮ ನಾಲ್ಕು ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಧನಂಜಯಪ್ಪ ಕರ್ತವ್ಯ ನಿರ್ವಹಿಸಿದರು. ಪಿಡಿಒ ಎಸ್. ಚಿದಾನಂದ ಸಹಕರಿಸಿದರು.
ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಸದಸ್ಯರಾದ ನಾಗರಾಜ ಗೌಡ, ಪಾಲಾಕ್ಷಪ್ಪ, ರಮೇಶ, ವಿರೂಪಾಕ್ಷಪ್ಪ, ಶೋಭಮ್ಮ, ಪೂಜಾ, ಸುಜಾತಮ್ಮ, ಶೈಲಾ, ಮುಖಂಡರಾದ ಡಾ.ಎಚ್.ಇ. ಜ್ಞಾನೇಶ್, ಗುರುಕುಮಾರ್ ಪಾಟೀಲ್, ರಾಜುಗೌಡ ತುಮರಿಕೊಪ್ಪ, ನಾಗರಾಜ ಗೌಡ, ಪ್ರಕಾಶ್ ಗೌಡ, ಅಭಿಷೇಕ್ ಗೌಡ ಬೆನ್ನೂರು, ಸುರೇಶ್ ಉದ್ರಿ, ಶಿವಮೂರ್ತಿ ಗೌಡ, ನಾಗರಾಜ ಕಲ್ಕೊಪ್ಪ, ರಾಘವೇಂದ್ರ ಜಡೆ, ವಿನಯ್ ಗೌಡ, ಶಿವಕುಮಾರ್ ಗೌಡ ಇತರರಿದ್ದರು.