

ಹುಬ್ಬಳ್ಳಿ: ಬೆಂಗಳೂರಿನ ಶ್ರೀ ಭಾಗವತಾಶ್ರಮದಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥರ 70ನೇ ವರ್ಷದ ಮಹೋತ್ಸವದ ನಿಮಿತ್ತ ನಡೆದ 140 ಜನ ವಿದ್ವಾಂಸರಿಗೆ ಸೂರಿಸಾರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸನ್ಮಾನ ಸಮಾರಂಭದಲ್ಲಿ ಹುಬ್ಬಳ್ಳಿಯಲ್ಲಿ ಪಾಠಪ್ರವಚನ ನಡೆಸುತ್ತಿರುವ ಪ್ರಸಿದ್ಧ ಕೊರ್ಲಹಳ್ಳಿ ಮನೆತನಸ್ಥರಾದ ಪಂ. ಕೊರ್ಲಹಳ್ಳಿ ನರಸಿಂಹಾಚಾರ್ಯ, ಪಂ. ಸಮೀರಾಚಾರ್ಯ ಕಂಠಪಲ್ಲಿ (ಕೊರ್ಲಹಳ್ಳಿ), ಪಂ. ಸುಘೋಷಾಚಾರ್ಯ ಕೊರ್ಲಹಳ್ಳಿ ಅವರಿಗೆ "ಸೂರಿಸಾರಂಗ ಪ್ರಶಸ್ತಿ' ನೀಡಿ ಗೌರವಿಸಲಾಯಿತು.