ಶೀಘ್ರ ಸಂಬರಗಿಮಠ ಹೆಸರಿನಲ್ಲಿ ಪದವಿ ಕಾಲೇಜು

6Manju9
ಬೆಳಗಾವಿ ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿವಕುಮಾರ ಸಂಬರಗಿಮಠ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮವನ್ನು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಉದ್ಘಾಟಿಸಿದರು. ಡಾ.ಅಲ್ಲಮಪ್ರಭು ಸ್ವಾಮೀಜಿ, ಡಾ.ಎಫ್.ವಿ.ಮಾನ್ವಿ ಇತರರಿದ್ದರು.
Published on

ಬೆಳಗಾವಿ: ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲ ಸ್ಥಾಪನೆಯಲ್ಲಿ ಲಿಂ.ಶಿವಕುಮಾರ ಸಂಬರಗಿಮಠ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವಕುಮಾರ ಸಂಬರಗಿಮಠ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಿತ ಭಾಷಿಯಾಗಿದ್ದ ಶಿವಕುಮಾರ ಹಣಕಾಸು ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದರು ಎಂದರು.

ಬೆಳಗಾವಿಯಲ್ಲಿ ಮೊದಲ ಬಾರಿಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿತಾಯವಾಗಿದ್ದ 24 ಲಕ್ಷ ರೂ.ಗಳನ್ನು ಕನ್ನಡ ಭವನಕ್ಕೆ ಸಿಗುವಂತೆ ಮಾಡಿದ್ದ ಸಂಬರಗಿಮಠ ಕಾರ್ಯ ಸ್ಮರಣೀಯ. ನಾಗನೂರು ರುದ್ರಾಕ್ಷಿ ಮಠದ ಉತ್ತರಾಧಿಕಾರಿಗಳ ನೇಮಕದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಮುಂಬರುವ ದಿನಗಳಲ್ಲಿ ಸಂಬರಗಿಮಠ ಹೆಸರಿನಲ್ಲಿ ಪದವಿ ಕಾಲೇಜು ಆರಂಭಿಸುವ ಯೋಜನೆ ಮಠದ್ದಾಗಿದೆ ಎಂದು ಮಾಹಿತಿ ನೀಡಿದರು.

ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಜಿಬಿಐಟಿ ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಡಾ. ಎಫ್.ವಿ.ಮಾನ್ವಿ, ಪ್ರಾಚಾರ್ಯ ಬಿ.ಆರ್.ಪಟಗುಂದಿ, ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಪಿ.ಹಿರೇಮಠ, ರಾಜೇಶ್ವರಿ ಸಂಬರಗಿಮಠ, ಬಸವರಾಜ ರೊಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net