ಶೀಘ್ರವೇ ಪೊಲೀಸ್ ಉಪಠಾಣೆ

28 KOTTUR 01
ಕೊಟ್ಟೂರಿನಲ್ಲಿರುವ ಹಳೆಯ ಪೊಲೀಸ್ ಠಾಣೆ ಖಾಲಿ ಸ್ಥಳ.ಹಗರಿಬೊಮ್ಮನಹಳ್ಳಿಯಲ್ಲಿ ಆಟೋ ಚಾಲಕರು ಮತ್ತು ಮಾಲೀಕ ಸಂಘದಿಂದ ಪ್ರತಿಭಟನೆ ನಡೆಯಿತು. ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ, ಕಿನ್ನಾಳ್ ಸುಭಾಷ, ಜಗನ್ನಾಥ್, ಉಪ್ಪಾರ್ ವೆಂಕಟೇಶ್ ಹಾಗೂ ಕೆ.ಕೈಲಾಸ್‌ನಾಥ್ ಇದ್ದರು.
Published on

ಕೊಟ್ಟೂರು: ಪಟ್ಟಣದಲ್ಲಿ ಸುಸಜ್ಜಿತ ನೂತನ ಠಾಣೆ ನಿರ್ಮಾಣವಾಗಿರುವುದರಿಂದ ಹಳೆಯ ಠಾಣೆ ಸ್ಥಳದಲ್ಲಿ ಶೀಘ್ರವೇ ಉಪಠಾಣೆ ತೆರೆಯಲಾಗುವುದು ಎಂದು ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ತಿಳಿಸಿದರು.

ಇಲ್ಲಿನ ಮಾದರಿ ಪೊಲೀಸ್ ಠಾಣೆ ಆವರಣಲ್ಲಿ ಬುಧವಾರ ಜನಸಂಪರ್ಕ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹಳೆಯ ಠಾಣೆ ಸುತ್ತಮುತ್ತ ಹೀರೆ ಕೊಟ್ಟೂರೇಶ್ವರ ಸ್ವಾಮಿ ದೇವಾಲಯ, ತೊಟ್ಟಿಲು ಮಠ, ಗಚ್ಚಿನ ಮಠ ಇರುವುದರಿಂದ ಉಪ ಠಾಣೆ ಅಗತ್ಯವಿದೆ.

ಕೊಟ್ಟೂರೇಶ್ವರ ಕಾರ್ತಿಕೋತ್ಸವ, ರಥೋತ್ಸವದ ಸಂದರ್ಭ ಹೆಚ್ಚಿನ ಸಂಖ್ಯೆ ಭಕ್ತರು ಸೇರುವುದರಿಂದ ಸುರಕ್ಷತೆ-ಅಪರಾಧ ತಡೆಗೆ ಉಪಠಾಣೆ ತೆರೆಯಲು ಎಸ್ಪಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಈ ಠಾಣೆ ನಿರ್ಮಿಸಿದ್ದರು. ಸ್ವಾತಂತ್ರ್ಯ ಹೋರಾಟದ ಅನೇಕ ಘಟನಾವಳಿಗಳಿಗೆ ಈ ಠಾಣೆ ಸಾಕ್ಷಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net