ಶೀಘ್ರದಲ್ಲಿಯೇ ಜ್ಯೋತಿ ಸಂಜೀವಿನಿಗೆ ಅನುಮೋದನೆ

Kankagiri Govt Employees Meeting
ಕನಕಗಿರಿಯಲ್ಲಿ ನಡೆದ ತಾಲೂಕು ಸರ್ಕಾರಿ ನೌಕರರ ಸಂಘದ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್ ಮಾತನಾಡಿದರು.
Published on

ಕನಕಗಿರಿ: ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಾಗಿದ್ದ ಜ್ಯೋತಿ ಸಂಜೀವಿನಿ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆಯುವ ಭರವಸೆಯಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಹೇಳಿದರು.

ಶನಿವಾರದಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಪಟ್ಟಣದ ಯಾತ್ರಿ ನಿವಾಸ ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಸಭೆ ಕಟ್ಟಡದಲ್ಲಿ ಶನಿವಾರ ನಡೆಯಿತು.

ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ. ಸಂಘದ ಚ್ಯುತಿಗೆ ಕೆಲವರು ಮಸಿ ಬಳೆಯುವ ಕೆಲಸ ನಡೆಸಿದ್ದು, ಅಂಥವರ ಮಾತಿಗೆ ನೌಕರರು ಮಾತಿಗೆ ಕಿವಿಗೊಡಬೇಡಿ. ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಅನುಮೋದನೆಯಾಗಲಿದ್ದು, ಎಲ್ಲಾ ನೌಕರರೂ ಉಚಿತ ಚಿಕಿತ್ಸೆ ಪಡೆಯಬಹುದು ಎಂದರು. ಕಡಿಮೆ ವೇತನ ವ್ಯವಸ್ಥೆಯ ವಿರುದ್ಧ ನೌಕರ ಸಂಘದ ಹೋರಾಟದಿಂದ ಕ್ರಮೇಣ ವೇತನ ಆಯೋಗದ ಮೂಲಕ ನೌಕರರಿಗೆ ವೇತನ ಹೆಚ್ಚಳವಾಗಲು ಕಾರಣವಾಗಿದೆ ಎಂದರು.

ನಂತರ ತಾಲೂಕಾಧ್ಯಕ್ಷ ವೆಂಕಟ ಮಧುಸೂದನ ಮಾತನಾಡಿದರು. ಶಿಕ್ಷಕ ಸೇವೆಯಿಂದ ನಿವೃತ್ತಿ ಹೊಂದಿದ ಒಂದೇ ಶಾಲೆಯಲ್ಲಿ ಇಡೀ ವೃತ್ತಿ ಜೀವನ ಮುಗಿಸಿದ ಶಿಕ್ಷಕ ಶರಣಪ್ಪ ಕೋಳೂರು ಸಹಿತ ಮಲ್ಲಪ್ಪ ಗೋಪಾಳಿ ಹಾಗೂ ಅವರನ್ನು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಜಿಲ್ಲಾ ಕಾರ್ಯದರ್ಶಿ ಶಂಕರಗೌಡ ಮಾ.ಪಾ., ತಾಲೂಕು ಉಪಾಧ್ಯಕ್ಷ ಸಿದ್ದಲಿಂಗಪ್ಪ ಗದ್ದಿ, ಕಾರ್ಯದರ್ಶಿ ಶಿವಪ್ಪ ಹೆಳವರ, ಕ್ರೀಡಾ ಕಾರ್ಯದರ್ಶಿ ಸಂತೋಷ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗಮೇಶ ಹಿರೇಮಠ, ಪ್ರಮುಖರಾದ ಪ್ರಕಾಶ, ಪರಸಪ್ಪ ಹೊರಪೇಟೆ, ಶಿವಾನಂದ ಬೆಲ್ಲದ್, ಮೋಹನರೆಡ್ಡಿ, ತುಗ್ಲೆಪ್ಪ ದೇಸಾಯಿ, ದೀಪಾ ಗಡಗಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net