ಶೀಘ್ರ ಗೋವಾ ರಾಜ್ಯಕ್ಕೆ ಶಾಖೆ ವಿಸ್ತರಣೆ

14BRG1
Published on

ಬೋರಗಾಂವ: ಅರಿಹಂತ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ 1,458 ಕೋಟಿ ರೂ. ಠೇವಣಿಯ ಮೆಲಿಗಲ್ಲು ದಾಟಿದ್ದು, ಸಂಸ್ಥೆಯು ಶ್ರೀದಲ್ಲೇ ಬಹು&ರಾಜ್ಯ ಕಾಯ್ದೆ ಮೂಲಕ ಗೋವಾ ರಾಜ್ಯದಲ್ಲೂ ಕಾರ್ಯಾಚರಣೆ

ವಿಸ್ತರಿಸಲಿದೆ ಎಂದು ಸಂಸ್ಥೆಯ ಅಧ್ಯ ಅಭಿನಂದನ ಪಾಟೀಲ ಮಾಹಿತಿ ನೀಡಿದರು.

ಪಟ್ಟಣದ ಶ್ರೀ ಅರಿಹಂತ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಸ್ಥಾಪಕ ಅಧ್ಯ ರಾವ್​ಸಾಹೇಬ ಪಾಟೀಲ ನೇತತ್ವದಲ್ಲಿ ಸಂಸ್ಥೆ 14.76 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಮಹಾರಾಷ್ಟ್ರದಲ್ಲಿ ಇನ್ನೂ 15 ಮತ್ತು ಕರ್ನಾಟಕದಲ್ಲಿ 24 ಶಾಖೆ ಪ್ರಾರಂಭಿಸಲಿದ್ದೇವೆ. ಸಂಸ್ಥೆಯು 17,937 ಸದಸ್ಯರು, 6.36 ಕೋಟಿ ಷೇರು ಬಂಡವಾಳ, 355.82 ಕೋಟಿ ರೂ. ಹೂಡಿಕೆ, 1458.23 ಕೋಟಿ ರೂ. ಠೇವಣಿ ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಠೇವಣಿಯಲ್ಲಿ 258 ಕೋಟಿ ರೂ. ಹೆಚ್ಚಳವಾಗಿದೆ. 1098.41 ಕೋಟಿ ಸಾಲ ವಿತರಿಸಲಾಗಿದೆ. ಸದಸ್ಯರು ಮತ್ತು ರೆತರ ಅಭಿವದಿಟಛಿಗಾಗಿ ವಿವಿಧ ಸಾಲ ಮತ್ತು ಠೇವಣಿ ಯೋಜನೆಗಳನ್ನು ಕೆಗೊಳ್ಳಲಾಗಿದೆ. ಸಕಾಲಿಕ ಸಾಲ ಒದಗಿಸಿದ್ದಕ್ಕಾಗಿ ಅಡಿಟ್​ ವರ್ಗದಲ್ಲಿ ಅ ಪ್ರಶಸ್ತಿ ಪಡೆದಿದೆ. ಸಂಸ್ಥೆಯು ತನ್ನ ಬೆಳವಣಿಗೆಗೆ ಸದಸ್ಯರೊಂದಿಗೆ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ವಿಶೇಷ ಸಹಕಾರ ಸಿಕ್ಕಿದೆ ಎಂದು ತಿಳಿಸಿದರು.

ಸಂಸ್ಥೆಯ ಸಿಇಒ ಅಶೋಕ್​ ಬಂಕಾಪುರೆ ಮಾತನಾಡಿ, ಸಂಸ್ಥೆಯು ಒಟ್ಟು 61 ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು.

ಸಂಸ್ಥೆಯ ಉಪಾಧ್ಯ ಸತೀಶ ಪಾಟೀಲ, ನಿರ್ದೇಶಕ ಸುಭಾಷ ಶೆಟ್ಟಿ, ಅಭಯಕುಮಾರ ಕರೋಲೆ, ಜೆಪಾಲ ನಾಗಾವೆ, ಅಪ್ಪಾಸಾಹೇಬ ಕಡೋಲೆ, ಶರದಕುಮಾರ ಲಡಗೆ, ಪೀರಗೊಂಡ ಪಾಟೀಲ, ಭುಜಗೊಂಡ ಪಾಟೀಲ, ಸಂದೀಪ ಪಾಟೀಲ, ಬಾಬಾಸಾಹೇಬ ಅ್ರಾಜ, ಶ್ರೀಕಾಂತ ವಸವಾಡೆ, ಶಿವಾನಂದ ರಾಜಮಾನೆ, ಸಿಇಒ ಅಶೋಕ ಬಂಕಾಪುರೆ, ಅಭಿನಂದನ ಬೆನಾಡೆ, ಅಭಯಕುಮಾರ ಖೋತ, ಭರತ ಗುಂಡೆ, ಪ್ರಕಾಶ ಜಂಗಟೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net