ಶೀಘ್ರ 5ಜಿ ಸಂಪರ್ಕ ಹೊಂದಲಿ

23manju4
ಬೆಳಗಾವಿ ನಗರದ ಬಿಎಸ್‌ಎನ್‌ಎಲ್ ಕೇಂದ್ರ ಕಚೇರಿ ಸಭಾಂಗಣದಲ್ಲಿ ಸೋಮವಾರ ಟಿಎಂಸಿ ಸಭೆಯಲ್ಲಿ ಜಗದೀಶ ಶೆಟ್ಟರ್ ಮಾತನಾಡಿದರು. ಈರಣ್ಣ ಕಡಾಡಿ, ಪ್ರಿಯಾಂಕಾ ಜಾರಕಿಹೊಳಿ ಇತರರಿದ್ದರು.
Published on

ಬೆಳಗಾವಿ: ಬಿಎಸ್‌ಎನ್‌ಎಲ್ ಸ್ವದೇಶಿ ತಂತ್ರಜ್ಞಾನ ಮೂಲಕ 4ಜಿ ಹಾಗೂ 5ಜಿ ಸಂಪರ್ಕದೊಂದಿಗೆ ಗ್ರಾಹಕರನ್ನು ಆಕರ್ಷಿಸುವ ಮೂಲಕ ಟೆಲಿಕಾಂ ಖಾಸಗಿ ಸಂಸ್ಥೆಗಳಿಗೆ ಕಠಿಣ ಸ್ಪರ್ಧೆ ನೀಡಬೇಕು ಎಂದು ಟೆಲಿಕಾಂ ಅಧಿಕಾರಿಗಳಿಗೆ ಸಂಸದ ಜಗದೀಶ ಶೆಟ್ಟರ್ ಸೂಚಿಸಿದರು.

ನಗರದ ಬಿಎಸ್‌ಎನ್‌ಎಲ್ ಕೇಂದ್ರ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಟೆಲಿಕಾಂ ಸಲಹಾ ಸಮಿತಿ (ಟಿಎಂಸಿ) ಸಭೆ ಹಾಗೂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಗತೀಕರಣ ಯುಗದಲ್ಲಿ ಟೆಲಿಕಾಂ ಖಾಸಗಿ ಕಂಪನಿಗಳು ಬಹಳ ವೇಗವಾಗಿ ಬೆಳೆಯುತ್ತಿವೆ. ಆದರೆ, ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡಿದ್ದರೂ ಗ್ರಾಹಕರಿಗೆ ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದಂತೆ ಆತ್ಮನಿರ್ಭರ್ ಭಾರತದಡಿ ಭಾರತವು ತನ್ನದೇ ಆದ 4ಜಿ ಸ್ಟಾಕ್, ಕೋರ್ ಸಿಸ್ಟಮ್ ಅಥವಾ ರೇಡಿಯೇಷನ್ ಆಕ್ಸೆಸ್ ನೆಟ್‌ವರ್ಕ್ ಎಂಬ ಟವರ್ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ಸ್ವದೇಶಿ ತಂತ್ರಜ್ಞಾನ ಹೊಂದಿರುವ ರಾಷ್ಟ್ರವಾಗಿದೆ ಎಂದು ತಿಳಿಸಿದರು.

ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಬಿಎಸ್‌ಎನ್‌ಎಲ್ ಪಿಜಿಎಂ ವಿಕಾಸ್ ಜಯಕರ, ಬಿಎಸ್‌ಎನ್‌ಎಲ್ ಡಿಜಿಎಂ ಮಲ್ಲಿಕಾರ್ಜುನ ತಾಳಿಕೋಟೆ, ಬಿಎಸ್‌ಎನ್‌ಎಲ್ ಎಜಿಎಂ ನಾಗೇಂದ್ರ ಬಾಳೇಕುಂದ್ರಿ, ಅರುಣ ಉಗರಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net