ಧರ್ಮದ ಅವಹೇಳನ ಸಲ್ಲ: ಸೂಡಿ ಜೂಕ್ತಿ ಹಿರೇಮಠ ಶ್ರಿಗಳು

Untitled
Published on

ಗದಗ: ಕೆಲ ಧರ್ಮ ಗುರುಗಳು ವೈಚಾರಿಕತೆ ಹೆಸರಿನಲ್ಲಿ ಹಿಂದೂ ಧರ್ಮದ ಅವಹೇಳನ ಮಾಡುತ್ತಿದ್ದಾರೆ. ಇದು ಸೂಕ್ತ ಬೆಳವಣಿಗೆಯಲ್ಲ ಎಂದು ಸೂಡಿ ಜೂಕ್ತಿ ಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಶ್ರಿಗಳು ಹೇಳಿದರು.
ಬೆಟಗೇರಿ ಶಹಪೂರಪೇಟೆ ವೀರಭದ್ರೇಶ್ವರ ದೇವಸ್ಥಾನದ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ಹಿಂದೂ ಧರ್ಮದಲ್ಲೇ ಇದ್ದು, ಹಿಂದೂ ಧರ್ಮದ ಅವಹೇಳನ ಮಾಡವರ ಸಂಖ್ಯೆ ಅಧಿಕವಾಗುತ್ತಿದೆ. ವೈಚಾರಿಕತೆ ಹೆಸರಿನಲ್ಲಿ ಧರ್ಮ ಅವಹೇಳ ಮಾಡುವರ ಬಗ್ಗೆ ಭಕ್ತರು ಎಚ್ಚರಗೊಳ್ಳಬೇಕು. ವೀರಶೈವ ಬಗ್ಗೆ ಅಪಹಾಸ್ಯ, ಅಪಮಾನ, ಅವಹೇಳನ ಮಾಡುವರಿಗೆ ವೀರಭದ್ರನೇ ಶಿಕ್ಷೆ ನೀಡುತ್ತಾನೆ. ಶಾಸ್ತ್ರವು ಗುರುವಿನಿಂದ ಬೋದನೆ ಆದರೆ, ಶಸ್ತ್ರವು ವೀರಭದ್ರ ದೇವರ ಕೈಯಲ್ಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net