ಸೊನ್ನಮರಡಿ ವೀರಭದ್ರೇಶ್ವರ ರಥೋತ್ಸವ ಸಂಪನ್ನ

Kh halli Jatre
ಹುಲಿಕೆರೆ ಗ್ರಾಮದ ಆರಾಧ್ಯದೈವ ಶ್ರೀ ಸೊನ್ನಮರಡಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
Published on

ಕಾನಹೊಸಹಳ್ಳಿ: ಸಮೀಪದ ಹುಲಿಕೆರೆ ಗ್ರಾಮದ ಹೊರವಲಯದಲ್ಲಿರುವ ಐತಿಹಾಸಿಕ ಶ್ರೀ ಸೊನ್ನಮರಡಿ ವೀರಭದ್ರೇಶ್ವರ ರಥೋತ್ಸವ ಬುಧವಾರ ಸಂಜೆ ಅದ್ದೂರಿಯಾಗಿ ಜರುಗಿತು.

ವೀರಭದ್ರೇಶ್ವರ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಸಕಲ ವಾದ್ಯಗೊಳೊಂದಿಗೆ ರಥದ ಬಳಿಗೆ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ ಪೂಜೆ ಮಾಡಿ ಜಯಘೋಷಗಳೊಂದಿಗೆ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠ್ಠಾಪಿಸಲಾಯಿತು.

ತದನಂತರ ಭಕ್ತರು ಶ್ರೀ ವೀರಭದ್ರೇಶ್ವರ ಮಹಾರಾಜ್ ಕೀ ಜೈ ಎಂದು ಜಯಘೋಷ ಹಾಕಿ ರಥ ಎಳೆದರು. ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ರಥವನ್ನು ಪಾದಗಟ್ಟೆವರೆಗೆ ಎಳೆದು ನಂತರ ಮೂಲ ಸ್ಥಳಕ್ಕೆ ತರಲಾಯಿತು.

ವಿಜಯನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಂದ ಭಕ್ತರು ಅಗಮಿಸಿದ್ದರು. ಕಾನಹೊಸಹಳ್ಳಿ ಠಾಣೆ ಪೊಲೀಸ್ ಸಿಬ್ಬಂ ಬಂದೋಬಸ್ತ್ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net