ಸೊನ್ನ ಗ್ರಾಮದಲ್ಲಿ ಕೋತಿಗಳ ಉಪಟಳ

ಕರಿಬಸಪ್ಪ, ಉಪ ವಲಯ ಅರಣ್ಯಾಧಿಕಾರಿ, ಹಗರಿಬೊಮ್ಮನಹಳ್ಳಿ.
ಕರಿಬಸಪ್ಪ ಉಪವಲಯ ಅರಣ್ಯಾಧಿಕಾರಿ, ಹಗರಿಬೊಮ್ಮನಹಳ್ಳಿ
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಸೊನ್ನ ಗ್ರಾಮದಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ಜನರಲ್ಲಿ ಭಯ ಮನೆ ಮಾಡಿದೆ. ಗ್ರಾಮದ ನಿವಾಸಿ ಕಾಳಮ್ಮ ಎನ್ನುವವರ ಮೇಲೆ ಇತ್ತೀಚೆಗೆ ಕೋತಿ ದಾಳಿಮಾಡಿ ತೀವ್ರ ಗಾಯಗೊಳಿಸಿದ್ದು,

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೋತಿಗಳ ಉಪಟಳ ಹೆಚ್ಚಾಗಿದ್ದು, ಮನೆ, ಅಂಗಡಿ, ಜನರ ಮೇಲೆ ದಾಳಿ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಕೋತಿಗಳನ್ನು ಸೆರೆಹಿಡಿದು ಕಾಡಿಗೆ ಬಿಡಬೇಕೆಂದು ಗ್ರಾಮದ ಪ್ರಮುಖರಾದ ಟಿ.ಮಹೇಶ್, ತೋಟಪ್ಪ ಇತರರು ಒತ್ತಾಯಿಸಿದ್ದಾರೆ.

ಈಗಾಗಲೇ ತರಬೇತುದಾರರಾದ ಗಂಗಾವತಿ ಮೌಲಾ ಮತ್ತು ಅವರ ತಂಡ ಗ್ರಾಮಕ್ಕೆ ಬಂದು, ಮೂರು ಕೋತಿಗಳನ್ನು ಹಿಡಿದಿದ್ದಾರೆ. ಜನರಿಗೆ ಗಾಯಗೊಳಿಸಿದ ಕೋತಿ ಸಿಗುತ್ತಿಲ್ಲ. ಅದನ್ನೂ ಶೀಘ್ರದಲ್ಲೇ ಹಿಡಿಯುವ ಪ್ರಯತ್ನ ಮಾಡುತ್ತಾರೆ.ಕರಿಬಸಪ್ಪಉಪವಲಯ ಅರಣ್ಯಾಧಿಕಾರಿ, ಹಗರಿಬೊಮ್ಮನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net