ಸೋನಿಯಾ ಗಾಂಧಿ ಪುಸ್ತಕದಲ್ಲಿ ಅರ್ಧಸತ್ಯ, ಅರ್ಧ ಸುಳ್ಳು : ಸಂಸದ ಯದುವೀರ್ ಟೀಕೆ

ಮೈಸೂರು ಅರಮನೆ ಸ್ವಾಧೀನಕ್ಕೆ ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ದೂರು
ಯದುವೀರ್Executive abuse to take over Mysore Palace: MP Yaduveer complains
Published on: 

ಮೈಸೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕವನ್ನು ನಾನು ಓದುವುದಿಲ್ಲ, ನನಗೆ ಓದಲು ಬೇರೆ ಸಾಕಷ್ಟು ಪುಸ್ತಕಗಳು ಇವೆ. ಅದರಲ್ಲಿ ಅರ್ಧ ಸತ್ಯ, ಅರ್ಧ ಸುಳ್ಳುಗಳೇ ಇರುತ್ತವೆ. ಕಾಂಗ್ರೆಸ್ ಇತಿಹಾಸವೇ ಆ ರೀತಿ ಇದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಟೀಕಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರೃ ದೊರೆತಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ನಾಯಕರು ತಮಗೆ ಬೇಕಾದ ಹಾಗೆ ಚರಿತ್ರೆಯನ್ನು ನಿರೂಪಣೆ ಮಾಡಿಕೊಂಡು ಬಂದಿರುವುದನ್ನು ನಾವು ಕಂಡಿದ್ದೇವೆ. ಹಾಗಾಗಿ ಸೋನಿಯಾ ಗಾಂಧಿ ಅವರ ಕೃತಿಯನ್ನು ನಾನು ಓದುವುದಿಲ್ಲ. ಎಲ್ಲರಿಗೂ ಜೀವನ ಚರಿತ್ರೆ ಬರೆಯುವ ಹಕ್ಕು ಇದೆ. ಆ ಕೃತಿಯನ್ನು ಓದುವವರು ಓದಲಿ. ಆ ಕೃತಿಯಲ್ಲಿ ಎಷ್ಟು ಸತ್ಯಾಂಶ ಇದೆ ಎಂಬ ಬಗ್ಗೆ ವಿಸ್ತಾರವಾದ ಚರ್ಚೆ ನಡೆಯಬೇಕಾಗಿದೆ ಎಂದರು.

ನಿಮಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸಲು ಸಿದ್ದರಿದ್ದೀರಾ? ಎಂಬ ಪ್ರಶ್ನೆಗೆ ಶಾಕ್ ಯದುವೀರ್, ನಾನು ರಾಜ್ಯಾಧ್ಯಕ್ಷನಾ? ಆ ಸ್ಥಾನಕ್ಕೆ ಸರಿಯಾದ ಅರ್ಹತೆ ಇರುವವರು ಆಯ್ಕೆಯಾಗುತ್ತಾರೆ. ಸಮರ್ಥ ಗುಣಗಳಿರುವವರು ಆ ಸ್ಥಾನವನ್ನು ನಿಭಾಯಿಸುತ್ತಾರೆ. ಈ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರೇ ಅಧ್ಯಕ್ಷರಾದರೂ ಪಕ್ಷವನ್ನು ಬಲವರ್ಧನೆ ಮಾಡಬೇಕು. ಈಗಿರುವವರು ಮುಂದುವರೆದರೂ ಸಂತೋಷ, ಬೇರೆಯವರು ಆದರೂ ಸಂತೋಷ. ನಾನು ನನ್ನ ಇತಿಮಿತಿಯಲ್ಲಿ ಪಕ್ಷ ಕಟ್ಟುತ್ತಿದ್ದೇನೆ ಎಂದರು.

ಕಾರ್ಯಕ್ರಮವೊಂದರಲ್ಲಿ ಇಟಲಿ ಮೂಲದ ವ್ಯಕ್ತಿ ‘ವೋಟ್ ಚೋರ್ ಗದ್ದಿ ಚೋರ್’ ಎಂದಾಗ ರಾಹುಲ್ ಗಾಂಧಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ರಾಹುಲ್ ಗಾಂಧಿ ದೇಶ ವಿರೋಧಿ ವಿದೇಶಿ ಶಕ್ತಿಗಳ ಜತೆ ಕೈ ಜೋಡಿಸಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದಾರೆ. ಸಂಸತ್‌ನಲ್ಲಿ ಮಾತಾಡಬೇಕಾದ ವಿಚಾರವನ್ನು ಬೀದಿಯಲ್ಲಿ ನಿಂತು ಮಾತಾಡುತ್ತಿದ್ದಾರೆ. ರಾಹುಲ್ ಗಾಂಧಿ ವಿಪಕ್ಷ ನಾಯಕನ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಜನರು ಚುನಾವಣೆ ಸಮಯದಲ್ಲಿ ಸೂಕ್ತ ತೀರ್ಮಾನ ಮಾಡುತ್ತಾರೆ ಎಂದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಬಾರಿ ಬಿಜೆಪಿ ಮತ್ತಷ್ಟು ಬಲವರ್ಧನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.