

ಮೈಸೂರು: ಮೈಸೂರು ಮೆಲೋಡಿ ಸಿಂಗರ್ಸ್ ಗ್ರೂಪ್ ವತಿಯಿಂದ ಜ.26 ರಂದು ಸಂಜೆ 4 ಗಂಟೆಗೆ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ‘ಅಮೃತ ಗಾನ ತರಂಗಿಣಿ’ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಪಿ.ಮೋಹನ್‌ಕುಮಾರ್ ತಿಳಿಸಿದರು.
ಇದೇ ವೇಳೆ ಖಾಸಗಿ ವಾಹಿನಿಯ ಪ್ರಮುಖ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದ ರತ್ನಮ್ಮ ಹಾಗೂ ಮಂಜಮ್ಮ ಅವರನ್ನು ಸನ್ಮಾನಿಸಲಾಗುವುದು. ಇದರಲ್ಲಿ ವೃತ್ತಿಪರರಲ್ಲದೆ ಕೇವಲ ಹವ್ಯಾಸವಾಗಿ ರೂಢಿಸಿಕೊಂಡಿರುವ ಗಾಯಕರೇ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗಾಯಕರಾದ ಲಕ್ಷ್ಮೀ ಹೇಮಂತ್, ಮಂಜುನಾಥ್, ಶೇಖರ್, ಭಾಸ್ಕರ್ ಇದ್ದರು.