

ಮೈಸೂರು: ಭೂಮಿಕಾ ಅಸೋಸಿಯೇಟ್ಸ್ ಮತ್ತು ಮೈಕ್ ಚಂದ್ರು ಗೆಳೆಯರ ಬಳಗದ ಸಹಯೋಗದಲ್ಲಿ ಜೂ.18ರಂದು ಸಂಜೆ 5.30ಕ್ಕೆ ಜೆಎಲ್‌ಬಿ ರಸ್ತೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ‘ಭಾವಸ್ಪಂದನ’ ಶೀರ್ಷಿಕೆ ಅಡಿಯಲ್ಲಿ ನಾಡಿನ ಖ್ಯಾತ ಕವಿಗಳ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಕಾಶವಾಣಿ ಕಲಾವಿದ ಮಂಜುನಾಥ್ ಹೇಳಿದರು.
ಸಂತ ಶಿಶುನಾಳ ಷರೀಫ, ಕುವೆಂಪು, ದ.ರಾ.ಬೇಂದ್ರೆ ಮೊದಲಾದ ಪ್ರಸಿದ್ಧ ಕವಿಗಳ ಗೀತೆಗಳನ್ನು ಆಕಾಶವಾಣಿ ಹಾಗೂ ದೂರದರ್ಶನದ ಯುವ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ. ಪ್ರವೇಶ ಉಚಿತವಾಗಿದೆ. ಭೂಮಿಕಾ ಅಸೋಸಿಯೇಟ್ಸ್ ಯಾವುದೇ ಲಾಭದ ಉದ್ದೇಶವಿಲ್ಲದೆ ಕೇವಲ ಕಲಾಸೇವೆ ಕಾರಣದಿಂದ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಯೋಜಕರಾದ ಕೆ.ಎಸ್.ಸುರೇಶ್, ಅಶ್ವತ್ ನಾರಾಯಣ್, ಮೈಸೂರು ಆನಂದ್, ರಾಜೇಶ್ ಇತರರಿದ್ದರು.