ಹಾಡು ಹಾಡಿ ರಂಜಿಸಿದ ಶಾಸಕರು

manvi mlas
ಮಾನ್ವಿಯಲ್ಲಿ ಶಾಸಕರಾದ ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ್ ಹಾಡು ಹಾಡುತ್ತಿರುವುದು.
Published on

ಮಾನ್ವಿ: ಪಟ್ಟಣದಲ್ಲಿ ಏರ್ಪಡಿಸಿದ್ದ ವಿವಾಹ ಕಾರ್ಯಕ್ರಮವೊಂದರಲ್ಲಿ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಕನ್ನಡ ಹಾಡು ಹಾಡುವ ಮೂಲಕ ನೆರೆದವರನ್ನು ರಂಜಿಸಿದರು.

ಮಸ್ಕಿ ಶಾಸಕ ಪುತ್ರ ಸತೀಶ್ ಗೌಡ ಹಾಗೂ ಗ್ರಾಮೀಣ ಶಾಸಕ ದದ್ದಲ್ ಅಣ್ಣನ ಮಗಳು ಐಶ್ವರ್ಯ ವಿವಾಹ ಇತ್ತೀಚೆಗೆ ಸಿಂಧನೂರು ತಾಲೂಕು ತುರ್ವಿಹಾಳದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಲಾಗಿತ್ತು.

ಮಹಾಶಿವರಾತ್ರಿ ದಿನವಾದ ಬುಧವಾರ ಪಟ್ಟಣದಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಇಬ್ಬರು ಶಾಸಕರು ಆರ್ಕೆಸ್ಟ್ರಾದ ವೇದಿಕೆ ಹತ್ತಿ ಮೈಕ್ ಹಿಡಿದು ‘ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು..’ ಹಾಡು ಹಾಡಿ ಸಂಭ್ರಮಿಸಿದರು. ಈ

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net