ಪದಾ ಹಾಡೂಣು ಬಾ 26ರಂದು

IMG-20230823-WA0013-1.jpg
Published on

ಹುಬ್ಬಳ್ಳಿ: ಇಲ್ಲಿಯ ಅನಂತ ಪ್ರೇರಣಾ ಕೇಂದ್ರ, ಸುನಿಧಿ ಕಲಾ ಸೌರಭ ವತಿಯಿಂದ "ಪದಾ ಹಾಡೂಣು ಬಾ' ಮಹಿಳೆಯರಿಗಾಗಿ ಜಾನಪದ ಗೀತೆಗಳ ಸ್ಪರ್ಧೆಯನ್ನು ಆ. 26ರಂದು ಬೆಳಗ್ಗೆ 11ಕ್ಕೆ ವಿಜಯನಗರದ ಕೆಂಪಣ್ಣವರ ಕಲ್ಯಾಣ ಮಂಟಪ ಬಳಿಯ ಅನಂತ ಪ್ರೇರಣಾ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಜಾನಪದ ಪರಿಷತ್ ಅಧ್ಯಕ್ಷ ಡಾ. ರಾಮು ಮೂಲಗಿ ಕಾರ್ಯಕ್ರಮ ಉದ್ಘಾಟಿಸುವರು. ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸುವರು ಎಂದು ಕಲಾ ಸೌರಭ ಕಾರ್ಯದರ್ಶಿ ವೀಣಾ ಅಠವಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net