ಹಾಡುಗಳ ಸ್ಪರ್ಧೆ ಜ. 28ರಿಂದ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ದೇಸಾಯಿ ಗಲ್ಲಿ ವಿಠ್ಠಲ ಮಂದಿರದಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವ ನಿಮಿತ್ತ ಮಂದಿರದ ಪುರಂದರ ಮಂಟಪದಲ್ಲಿ ಮಹಿಳಾ ಹಾಗೂ ಭಜನಾ ಮಂಡಳಿಗಳಿಗೆ ಹರಿದಾಸರು ರಚಿಸಿದ ಹಾಡಗಳ ಸ್ಪರ್ಧೆ ಏರ್ಪಡಿಸಲಾಗಿದೆ.

ಜ. 28ರಂದು ಹರಿದಾಸರು ರಚಿಸಿದ ವಿನಾಯಕನ ಹಾಡುಗಳ ಸ್ಪರ್ಧೆ, ಜ. 29ರಂದು ಹರಿದಾಸರು ರಚಿಸಿದ ಶ್ರೀ ನರಸಿಂಹ ದೇವರ ಹಾಡುಗಳ ಸ್ಪರ್ಧೆಯು ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ನಡೆಯಲಿದೆ. ಆಸಕ್ತರು ಮಂಡಳಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇತರ ಮಾಹಿತಿಯೊಂದಿಗೆ ಜ. 10ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ವಿಠ್ಠಲ ಮಂದಿರ ಸಂಪರ್ಕಿಸಬಹುದು ಎಂದು ಕೆ.ಆರ್​. ದೇಸಾಯಿ ಹಾಗೂ ಎಸ್​.ಬಿ. ಗುತ್ತಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net