ಗಾನ, ದಾನ, ಜ್ಞಾನ ಕಾರ್ಯಕ್ರಮ 15ರಂದು

images
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವಿದ್ಯಾಗಿರಿಯ ಧಾರವಾಡ ಕರೋಕೆ, ದುರ್ಗಾ ಕಾಲನಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಹಾಗೂ ರೋಟರಿ ರಕ್ತಭಂಡಾರದ ಸಹಯೋಗದೊಂದಿಗೆ 78ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಗಾನ, ದಾನ, ಜ್ಞಾನ ಕಾರ್ಯಕ್ರಮವನ್ನು ಆ. 15ರಂದು ಆಯೋಜಿಸಲಾಗಿದೆ. ದುರ್ಗಾ ಕಾಲನಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಜರುಗುವುದು.
ಬೆಳಗ್ಗೆ 9ರಿಂದ ಸಂಜೆ 4ರವರೆಗೆ ರಕ್ತದಾನ ಶಿಬಿರ ಜರುಗುವುದು. ಮಧ್ಯಾಹ್ನ 1ರಿಂದ ರಕ್ತದಾನ ಅರಿವು ಹಾಗೂ ವ್ಯಸನಮುಕ್ತ ಭಾರತ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ವಿನಿಮಯ ನಡೆಯಲಿದೆ. ಮಧ್ಯಾಹ್ನ 2ರಿಂದ 40ಕ್ಕೂ ಮೇಲ್ಪಟ್ಟ ವಯಸ್ಸಿನವರಿಗೆ ಹಳೆಯ ಹಾಡುಗಳನ್ನು ಹಾಡಲು ಅವಕಾಶ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net