

ಮುಧೋಳ : ನಿತ್ಯ ಕುಡಿದು ಮನೆಯಲ್ಲಿ ಗಲಾಟೆ ನಡೆಸುತ್ತಿದ್ದ ಮಾವನಿಗೆ ಅಳಿಯಂದಿರು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಟನೆ ಸಮೀಪದ ಅಕ್ಕಿಮರಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಈರಪ್ಪ ನಡುವಿನಮನಿ (50) ಅಳಿಯಂದಿರಿಂದ ಹಲ್ಲೆಗೊಳಗಾದ ವ್ಯಕ್ತಿ. ಸೋಮವಾರ ರಾತ್ರಿ ಎಂದಿನಂತೆ ಕುಡಿದು ಮನೆಯಲ್ಲಿ ಅಳಿಯಂದಿರೊಂದಿಗೆ ಜಗಳ ಶುರು ಮಾಡಿದ್ದಾನೆ. ಈತನ ನಡವಳಿಕೆಯಿಂದ ಬೇಸತ್ತ ಅಳಿಯಂದಿರು ಆತನ ಮೇಲೆ ಪೆಟ್ರೋಲ್ ಎರಚಿ, ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ದೇಹದ ಶೇ. 70ರಷ್ಟು ಭಾಗ ಸುಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಟನೆಗೆ ಸಂಬಂಧಿಸಿದಂತೆ ಮುಧೋಳ ಠಾಣೆಯಲ್ಲಿ ದೂರು ದಾಖಲಾಗಿದೆ.