ಮಾವನ ಕೊಲೆ ಯತ್ನ, ಆರೋಪಿ ಅಳಿಯ ಪರಾರಿ

Crime Scene
Published on

ಮೂಡುಬಿದಿರೆ: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಅಳಿಯ ತನ್ನ ಮಾವನ ಕೊಲೆಗೆ ಯತ್ನಿಸಿದ ಘಟನೆ ಮಹಾವೀರ ಕಾಲೇಜು ರಸ್ತೆ ಬಳಿ ನಡೆದಿದೆ.

ಇಸ್ಮಾಯಿಲ್ ಸ್ಕೂಟರ್‌ನಲ್ಲಿ ಮೂಡುಬಿದಿರೆಯತ್ತ ಬರುತ್ತಿದ್ದಾಗ, ಅಳಿಯ ಆತೂರ್ ನಸೀಬ್ ಕಾರಿನಲ್ಲಿ ಬಂದು ಮಾವನ ಸ್ಕೂಟರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಮಾವನ ಕಾಲಿಗೆ ಮಾರಕಾಯುಧದಿಂದ ಕಡಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿ ಆತೂರ್ ನಸೀಬ್ ಹಾಗೂ ಆತನ ಜತೆಯಲ್ಲಿದ್ದ ಇತರ ಮೂವರ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net