

ಗದಗ: ಅತ್ತೆ ಸಾವಿಗೀಡಾದ ಸುದ್ದಿ ತಿಳಿದು ಅಳಿಯ ಸಹ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಹೊರಕೇರಿ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.
ರಮೀಜಾ ಮಂದರಕಂಡಿ (48) ಹಾಗೂ ಅಳಿಯ ಬಸೀರ್ ಅಹ್ಮದ್ ಪಟಗಾರ (39) ಮೃತ ದುರ್ದೈವಿಗಳು. ಅತ್ತೆ ಹೃದಯಾಘಾತದಿಂದ ಸಾವನ್ನಪ್ಪಿರುವ ವಿಷಯ ತಿಳಿದು ಅಳಿಯನಿಗೂ ಹೃದಯಾಘಾತವಾಗಿದೆ.
ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಇಬ್ಬರನ್ನು ಒಟ್ಟಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ಸಂಬಂಧ ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)