ಮಗ ಸತ್ತ ಬೆನ್ನಿಗೇ ಚಿಕ್ಕಪ್ಪನ ಸಾವು.. ಎರಡು ಬಲಿ ತೆಗೆದುಕೊಂಡ 'ಶಾಕ್​'!

Curent Shock Power Touch
Published on

ಗದಗ: ಒಬ್ಬರ ಸಾವಿನ ವಿಷಯ ಕೇಳಿ ಅವರ ಸಂಬಂಧಿಕರೂ ಆಘಾತಗೊಂಡು ಸಾವಿಗೀಡಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಆ ಪಟ್ಟಿಗೆ ಇದೀಗ ಮತ್ತೊಂದು ಪ್ರಕರಣ ಸೇರಿಕೊಂಡಿದೆ.


ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸ ಗಾಡಗೋಳಿ ಗ್ರಾಮದಲ್ಲಿನ 29 ವರ್ಷ ವಯಸ್ಸಿನ ಪ್ರವೀಣ್​ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ಗೆ ಒಳಗಾಗಿ ಮೃತಪಟ್ಟಿದ್ದರು. ಅವರ ಸಾವಿನ ಸುದ್ದಿ ಕೇಳಿ ಶಾಕ್​ನಿಂದ ಆಘಾತಕ್ಕೀಡಾದ ಅವರ ಚಿಕ್ಕಪ್ಪ ಕುಬೇರಪ್ಪ (60) ಕೂಡ ಮೃತಪಟ್ಟಿದ್ದಾರೆ.


ಮನೆ ನಿರ್ಮಾಣದ ವೇಳೆ ವಿದ್ಯುತ್ ಸ್ಪರ್ಶವಾಗಿ ಈ ಅವಘಡ ಸಂಭವಿಸಿತ್ತು. ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net