ತಾಯಿ ನೋಡಲು ಬಂದ ಮಗ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

Published on

ದೇವನಹಳ್ಳಿ: ತಾಯಿಯನ್ನು ನೋಡಲು ಹೊರರಾಜ್ಯದಿಂದ ಬಂದಿದ್ದ ಪುತ್ರ, ಅಪಾರ್ಟ್​ಮೆಂಟ್​ವೊಂದರ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಶ್ಚಿಮಬಂಗಾಳದ ಡಾರ್ಜಿಲಿಂಗ್​ನ ಅಜಯ್​ (25) ಮೃತ. ದೇವನ ಹಳ್ಳಿಯಲ್ಲಿನ ಬೆಂಗಳೂರು ರಸ್ತೆಯ ಅಪಾರ್ಟ್​ಮೆಂಟ್​ನಲ್ಲಿ ಅಜಯ್​ನ ತಾಯಿ ಕೆಲಸ ಮಾಡುತ್ತಿದ್ದರು. ತಾಯಿಯನ್ನು ನೋಡಲು ಶುಕ್ರವಾರ ಡಾರ್ಜಿಲಿಂಗ್​ನಿಂದ ದೇವನಹಳ್ಳಿಗೆ ಬಂದಿದ್ದ ಅಜಯ್​ಗೆ ರಾತ್ರಿ ತಂಗಲು ಅಪಾರ್ಟ್​ಮೆಂಟ್​ನಲ್ಲಿ ಅವಕಾಶವಿಲ್ಲ. ಮಾಲೀಕರು ನನಗೊಬ್ಬಳಿಗೆ ಮಾತ್ರ ಇರಲು ಅವಕಾಶ ಕೊಟ್ಟಿದ್ದು, ನೀನು ಸೆಕ್ಯೂರಿಟಿ ಕೋಣೆಯಲ್ಲಿ ಮಲಗು ಎಂದು ತಾಯಿ ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪದ ಅಜಯ್​ ತಡರಾತ್ರಿ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಗಾಯಗೊಂಡಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಲಿಸಿಲ್ಲ ಎನ್ನಲಾಗಿದ್ದು, ನಗರಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀೆ ಬಳಿಕ ಪಾಲಕರಿಗೆ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net