ತಾಯಿ ಅನಾರೋಗ್ಯದಿಂದ ಮನನೊಂದ ಪುತ್ರ ಆತ್ಮಹತ್ಯೆ

Hanging
Published on

ಕಾಸರಗೋಡು: ವೃದ್ಧ ತಾಯಿ ಗಂಭೀರಾವಸ್ಥೆಯಲ್ಲಿರುವುದರಿಂದ ಮನನೊಂದ ಪುತ್ರ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ತಾಯಿಯೂ ಮೃತಪಟ್ಟ ಘಟನೆ ಪುಲ್ಲೂರ್‌ನಲ್ಲಿ ನಡೆದಿದೆ.

ಪುಲ್ಲೂರ್ ಕೊಡವಲ ಚೇರಕ್ಕರ ನಿವಾಸಿ ಸಿ.ಕುಞಿಕಣ್ಣನ್(58) ಮೃತದೇಹ ಕಾಞಂಗಾಡು ವೆಳ್ಳಾಯಿ ಸೇತುವೆ ಸನಿಹ ಹಿತ್ತಿಲಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಾರದ ಹಿಂದೆ ತಾಯಿ ನಾರಾಯಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಮನೆಗೆ ಕರೆದೊಯ್ಯುವಂತೆ ಸೂಚಿಸಿದ ಕಾರಣ ಕುಞಿಕಣ್ಣನ್ ಹಾಗೂ ಸಹೋದರರು ವಾಹನದಲ್ಲಿ ತಾಯಿಯನ್ನು ಮನೆಗೆ ಕರೆದೊಯ್ಯುತ್ತಿರುವಾಗ ಎದೆನೋವಿಗೆ ಔಷಧಿ ಖರೀದಿಸಲಿರುವುದಾಗಿ ತಿಳಿಸಿ ಕುಞಿಕಣ್ಣನ್ ವಾಹನದಿಂದ ಹಾದಿಮಧ್ಯೆ ಇಳಿದಿದ್ದರು. ಮನೆಗೆ ತಲುಪಿ ಅಲ್ಪಹೊತ್ತಿನಲ್ಲಿ ತಾಯಿ ನಾರಾಯಣಿ(91) ಮೃತಪಟ್ಟಿದ್ದರು. ನಂತರ ಕುಞಿಕಣ್ಣನ್ ಅವರನ್ನು ಹುಡುಕಾಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕುಞಿಕಣ್ಣನ್ ಅವಿವಾಹಿತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net