ಮಗನಿಗೆ ಮಕ್ಕಳಾಗಲಿಲ್ಲವೆಂದು ವಿಷ ಸೇವಿಸಿ ವೃದ್ಧೆ ಆತ್ಮಹತ್ಯೆ

Crime Logo
Published on

ರಾಣೆಬೆನ್ನೂರ: ತನ್ನ ಮಗನಿಗೆ ಮಕ್ಕಳಗಾಗಲಿಲ್ಲ ಎಂದು ಮಾನಸಿಕ ಮಾಡಿಕೊಂಡ ವೃದ್ಧೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೀಲದಹಳ್ಳಿಯಲ್ಲಿ ಶುಕ್ರವಾರ ಸಂಭವಿಸಿದೆ.
ಗಿರಿಜಮ್ಮ ಬಸವಂತಪ್ಪ ಮಾಲಿಂಗಪ್ಪನವರ (65) ಮೃತ ವೃದ್ಧೆ.
ಇವರು ತಮ್ಮ ಮಗನಿಗೆ ಮದುವೆಯಾಗಿ 6 ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ಮಾನಸಿಕ ಮಾಡಿಕೊಂಡು ಮನೆಯಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net