ಹೊಡೆದು ತಾಯಿಯನ್ನೇ ಕೊಂದ ಮಗ

Oplus_16908288
ಸಂತೋಷ್ (19) ಹತ್ಯೆಗೈದ ಆರೋಪಿ
Published on

ಆಲೂರು: ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಮಗ ತಾಯಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಚನ್ನಾಪುರ ಗ್ರಾಮದ ನಾಗಯ್ಯ ಅವರ ಕಿರಿಯ ಹೆಂಡತಿ ಪ್ರೇಮಮ್ಮ (40) ಮೃತರು. ಈಕೆಯ ಪುತ್ರ ಸಂತೋಷ್ (19) ಹತ್ಯೆಗೈದ ಆರೋಪಿ.

ಆಯುಧ ಪೂಜೆ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ 10.30ರ ಸಮಯದಲ್ಲಿ ಮಾಂಸದೂಟಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದರು. ಪ್ರೇಮಮ್ಮ ಅವರಿಗೂ ಕುಡಿತದ ಚಟವಿದ್ದು, ಕೆಲಸ ಮಾಡುತ್ತಲೇ ಜೋರಾಗಿ ಮಾತನಾಡುತ್ತಿದ್ದರು. ಮನೆಗೆ ನೆಂಟರು ಬಂದಾಗಲಾದರೂ ಸುಮ್ಮನಿರು ಎಂದು ಮಗ ಎಷ್ಟೇ ಹೇಳಿದರೂ ಪ್ರೇಮಮ್ಮ ಕೇಳಲಿಲ್ಲ. ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಸಂತೋಷ್ ಸ್ಥಳದಲ್ಲಿದ್ದ ತಂದೆ ನಾಗಯ್ಯ ಅವರ ಎದುರಿಗೇ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರ ಅಸ್ವಸ್ಥರಾದ ಪ್ರೇಮಮ್ಮ ಅವರನ್ನು ಹಿಮ್ಸ್‌ಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net