ಗ್ರಾಪಂ ಸರ್ವತೋಮುಖ ಅಭಿವೃದ್ಧಿಗೆ ಒತ್ತು

sompura gp election
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಸೋಂಪುರ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ತೀರ್ಥ ಪ್ರಸಾದ್ ಹೇಳಿಕೆ

ಇ-ಆಂದೋಲನಕ್ಕೆ ಆದ್ಯತೆ

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಸೋಂಪುರ ಗ್ರಾಮ ಪಂಚಾಯಿತಿಗೆ ಸೋಮವಾರ ಅಧ್ಯಕ್ಷೆಯಾಗಿ ಪ್ರೇಮಾ ತೀರ್ಥಪ್ರಸಾದ್ ಹಾಗೂ ಉಪಾಧ್ಯಕ್ಷೆಯಾಗಿ ಪಿ.ಲಾವಣ್ಯಜಗದೀಶ್ ಅಧಿಕಾರ ಸ್ವೀಕರಿಸಿದರು.
ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿದ್ದು ಅಲ್ಲಿನ ಸಮಸ್ಯೆಗಳನ್ನು ಅರಿಯಲಾಗಿದೆ. ಚರಂಡಿ, ಕಸದ ಸಮಸ್ಯೆ ಹಾಗೂ ಸ್ವಚ್ಛತೆಯ ಕುರಿತು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಗ್ರಾಮಗಳಲ್ಲಿ ಇ-ಆಂದೋಲನ ಮಾಡುವ ಮೂಲಕ ಕೋಳಿತ್ಯಾಜ್ಯ ಮತ್ತು ಪ್ಲಾಸ್ಟಿಕ್‌ಗಳನ್ನು ರಸ್ತೆಯಲ್ಲಿ ಸುರಿಯುತ್ತಿರುವವರ ಮೇಲೆ ಕ್ರಮಕ್ಕೆ ಸೂಚಿಸಲಾಗುವುದು ಎಂದು ಅಧ್ಯಕ್ಷೆ ಪ್ರೇಮಾ ತೀರ್ಥಪ್ರಸಾದ್ ತಿಳಿಸಿದರು.
ತೆರಿಗೆ ಪಾವತಿಸದ ಕಾರ್ಖಾನೆಗಳಿಗೆ ನೋಟಿಸ್ ನೀಡಿ, ನಮ್ಮಲ್ಲಿರುವ ಅನೇಕ ಕೈಗಾರಿಕೆಗಳಿಂದ ಸಿಎಸ್‌ಆರ್ ಅನುದಾನದಿಂದ ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಲು ಸೂಚಿಸಲಾಗುವುದು ಎಂದರು.
ಉಪಾಧ್ಯಕ್ಷೆ ಪಿ.ಲಾವಣ್ಯ ಜಗದೀಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಸಂತೆ ಕಸದ ಹರಾಜು, ಮಾಂಸದಂಗಡಿಗಳ ಹರಾಜು ಹಾಕಲಾಗಿದೆ. ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಮನೆಯಲ್ಲೇ ಬೇರ್ಪಡಿಸಿ ವಾಹನಕ್ಕೆ ನೀಡಬೇಕು. ಎಲ್ಲೆಂದರಲ್ಲಿ ಕಸ ಹಾಕದೆ ಸ್ವಚ್ಛತೆ ಕಾಪಾಡಬೇಕು. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಕಸದ ಕುರಿತು ನೋಟಿಸ್ ನೀಡಿ ಕಸ ತೆಗೆಯಲು ಸೂಚಿಸಲಾಗಿವುದು. ಸ್ಥಳೀಯ ಆಡಳಿತ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲ ಕೈಗಾರಿಕೆಗಳು ಬದ್ಧವಾಗಿರಬೇಕು ಎಂದರು.
ಸದಸ್ಯರಾದ ಆರ್.ಶಿವಕುಮಾರ, ಪಂಚಾಕ್ಷರಿ, ನಾಗರತ್ನಮ್ಮ, ಮಹಾಲಕ್ಷಮ್ಮ, ಶಿಲ್ಪಾ, ಡಿ.ಆರ್.ಬಸವರಾಜು, ಜಿ.ಅಶೋಕ, ಲಕ್ಷೀದೇವಿ, ಎನ್.ಎ.ಪ್ರೇಮಾ, ಗೌರಮ್ಮ, ಪವಿತ್ರಾ, ಚಿಕ್ಕಮ್ಮಮಂಜುನಾಥ, ರಾಜೇಶ್ವರಿ. ಸಿದ್ದಯ್ಯ, ಸರೋಜಮ್ಮ, ಲಕ್ಷಮ್ಮ, ಇಂದ್ರಮ್ಮ ಪರಮೇಶ್, ಆನಂದಕುಮಾರ, ಪಿ.ಆರ್.ರಮಾದೇವಮ್ಮ ಯುವರಾಜ, ಮಂಗಳಮ್ಮ, ಬೈಲಪ್ಪ, ಗಂಗಾಧರ, ಎಂ.ಬಿ.ಮಂಜುಳಾ. ಪಿಡಿಒ ಎ.ಎಂ.ರವಿಶಂಕರ್, ಕಾರ್ಯದರ್ಶಿ ಎಚ್.ಹನುಂತರಾಜು, ದ್ವಿತೀಯ ದರ್ಜೆ ಸಹಾಯಕ ಎಚ್.ಮಂಜುನಾಥ, ಬಿಲ್ ಕಲೆಕ್ಟರ್ ಪ್ರಸನ್ನಕುಮಾರ್, ಸಿಬ್ಬಂದಿ ರಾಮಕೃಷ್ಣ, ಬಸಣ್ಣ, ನರಸಿಂಹಮೂರ್ತಿ, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net