

ಶಿಗ್ಗಾಂವಿ: ಯಾವುದೋ ವಾಹನ ಡಿಕ್ಕಿಯಾಗಿ ಪಾದಚಾರಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಸೋಮಾಪುರ-ಹೊನ್ನಾಪುರ ಮಧ್ಯೆ ಭಾನುವಾರ ನಡೆದಿದೆ.
ತಾಲೂಕಿನ ಕಡಹಳ್ಳಿಯ ಫಕ್ಕೀರಪ್ಪ ಚನ್ನಪ್ಪ ಮುಂದಿನಮನಿ ಮೃತ ಪಾದಚಾರಿ.
ಇವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಕೆಳಗೆ ಬಿದ್ದ ಫಕ್ಕೀರಪ್ಪ ಮೇಲೆ ವಾಹನ ಹರಿದು ಹೋಗಿದೆ ಎನ್ನಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.