ಯಾವುದೋ ವಾಹನ ಡಿಕ್ಕಿಯಾಗಿ ಬೈಕ್​ ಸವಾರ ಸಾವು

Crime Logo
Published on


ರಾಣೆಬೆನ್ನೂರ: ಯಾವುದೋ ವಾಹನ ಡಿಕ್ಕಿಯಾಗಿ ಬೈಕ್​ ಸವಾರನೊಬ್ಬ ಬಿದ್ದು ಮೃತಪಟ್ಟ ಟನೆ ತಾಲೂಕಿನ ಎನ್​ಎಚ್​&48ರ ಮಾಗೋಡ ಸೇತುವೆ ಬಳಿ ಸೋಮವಾರ ನಡೆದಿದೆ.
ರಟ್ಟಿಹಳ್ಳಿ ತಾಲೂಕಿನ ಲಿಂಗದೇವರಕೊಪ್ಪದ ಚೇತನಕುಮಾರ ನಾಗರಾಜ ಅರ್ಕಾಚಾರಿ (21) ಮೃತ ಬೈಕ್​ ಸವಾರ.
ಈತ ರಾಣೆಬೆನ್ನೂರ ಕಡೆಯಿಂದ ಹರಿಹರ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಕೆಳಗೆ ಬಿದ್ದ ಚೇತನಕುಮಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net