ಯಾವುದೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು

Crime Logo
Published on

ಬ್ಯಾಡಗಿ: ಯಾವುದೋ ವಾಹನ ಹಿಂದಿನಿAದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಮೋಟೆಬೆನ್ನೂರ ಬಳಿ ಎನ್‌ಎಚ್-೪೮ರಲ್ಲಿ ಬುಧವಾರ ಸಂಭವಿಸಿದೆ.
ಶಿಗ್ಗಾAವಿ ತಾಲೂಕು ಹುಲಗೂರ ಗ್ರಾಮದ ನಾಗರಾಜ ಚನ್ನವೀರಪ್ಪ ಮಡ್ಲಿಕರ ಮೃತ ವ್ಯಕ್ತಿ.
ಇವರು ಹಾವೇರಿ ಕಡೆಯಿಂದ ರಾಣೆಬೆನ್ನೂರಿಗೆ ತೆರಳುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net