ಸೋಮೇಶ್ವರ ದರ್ಶನ ಪಡೆದ ಭಕ್ತಗಣ

14MURAGOD1A
Published on

ಮುರಗೋಡ: ಸಮೀಪದ ಸೊಗಲ ಸೋಮೇಶ್ವರನ ೇತ್ರದಲ್ಲಿ ಮಂಗಳವಾರ ಜಲಪಾತದಡಿ ಭಕ್ತರು ಸ್ನಾನ ಮಾಡಿ ಸಾಗರೋಪಾದಿಯಲ್ಲಿ ದೇವರ ದರ್ಶನ ಪಡೆದರು. ಎಲ್ಲಿ ನೋಡಿದರಲ್ಲಿ ಜನಸಾಗರದಿಂದ ೇತ್ರ ಕಿಕ್ಕಿರಿದಿತ್ತು.

ಸೋಮೇಶ್ವರನ, ಶಿವ&ಪಾರ್ವತಿ ಗದ್ದುಗೆಯನ್ನು ಹೂಗಳಿಂದ ಸಿಂಗರಿಸಲಾಗಿತ್ತು. ವಿವಿಧ ಪೂಜಾ ಕೈಂಕರ್ಯ ಜರುಗಿದವು. ತೆಪ್ಪದ ರಥೋತ್ಸವನ್ನು ಕಬ್ಬು, ತೆಂಗು, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ವಾದ್ಯಮೇಳಗಳಿಂದ ಸೋಮೇಶ್ವರನ ದೇವಸ್ಥಾನದಲ್ಲಿದ್ದ ಬೆಳ್ಳಿ ಮೂರ್ತಿಯನ್ನು ಪಲ್ಲಕಿಯಲ್ಲಿ ತಂದು ತೆಪ್ಪದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಸಂಜೆ ಹೊಸೂರ ಗುರುಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಹೊಸೂರ&ಬೆಲಹೊಂಗಲ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ ರಥೋತ್ಸವಕ್ಕೆ ಚಾಲನೆ ನೀಡಿದರು. ಹಿರಿಯ ಅರ್ಚಕರಾದ ನಿಂಗಯ್ಯ ಪೂಜೇರಿ, ಗುರುಸ್ವಾಮಿ ಹೊಸಪೇಟಿಮಠ ಪ್ರಾರ್ಥಿಸಿದರು. ಟ್ರಸ್ಟ್​ ಅಧ್ಯ, ಆಡಳಿತ ಮಂಡಳಿ ಸರ್ವ ಸದಸ್ಯರು, ಸುತ್ತಲಿನ ಗ್ರಾಮಗಳ ಪ್ರಮುಖರು ಹಾಗೂ ತಪ್ಪೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ, ಬಾಳೆಹಣ್ಣು, ಹೂವು ರಥಕ್ಕೆ ಅರ್ಪಿಸಿ ಭಕ್ತಿ&ಭಾವ ಮೆರದರು. ಕೆಳಗಿನ ಹೊಂಡದಲ್ಲಿ ಹಾಗೂ ಜಲಾಧಾರೆಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.

ಅಪಾರ ಜನಸ್ತೋಮ: ಬೆಳಗ್ಗೆಯಿಂದಲೇ ಚಕ್ಕಡಿ, ಬೆಕ್​, ವಾಹನ, ಟ್ರಾಕ್ಟರ್​ ಮುಖಾಂತರ ಸಾವಿರಾರು ಭಕ್ತರು ಆಗಮಿಸಿ ಸ್ನಾನ ಮಾಡಿ, ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ವಿಶೇಷ ಭೋಜನ ಸವಿದರು. ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ಮಕರ ಸಂಕ್ರಮಣ ಆಚರಿಸಿದರು. ಮಕ್ಕಳು ಜಿಂಕೆ ವನ, ಹುಲಿ ಗವಿ ಇತರ ದೇವಾಲಯಗಳಿಗೂ ಭೇಟಿ ನೀಡಿದರು.

ಕಕ್ಕೇರಿ ವರದಿ: ಖಾನಾಪುರ ತಾಲೂಕಿನ ಕಕ್ಕೇರಿ, ಭೂರನಕಿ, ಲಿಂಗನಮಠ, ಮಾಸ್ಕೆ ನಟ್ಟಿ, ಚುಂಚವಾಡ, ಸುರಪುರ ಕೆರವಾಡ, ಸುರಪುರ, ಗೋಧೋಳಿ ಗುಂಡಳ್ಳಿ, ಬೀಡಿ, ನಂದಗಡ ಸೇರಿ ಹಲವಾರು ಗ್ರಾಮಗಳಲ್ಲಿ ಮಂಗಳವಾರ ಜನರು ಮಕರ ಸಂಕ್ರಾಂತಿ ಸಡಗರದಿಂದ ಆಚರಿಸಿದರು. ಸಂಕ್ರಾಂತಿಯ ನಿಮಿತ್ತ ಸಮೀಪದ ಹುಲಿಕೆರೆ ಗ್ರಾಮದ ಕೆರೆಯೊಂದರಲ್ಲಿ ಪುಣ್ಯ ಸ್ನಾನ ಮಾಡಿ ಹಬ್ಬ ಆಚರಿಸಿದರು. ದೇವರ ದರ್ಶನ ಪಡೆದು ಸಿಹಿ ಅಡುಗೆ ಸವಿದರು. ಎಳ್ಳು ಬೆಲ್ಲ ಹಂಚಿಕೊಂಡು ಶುಭಾಶಯ ವಿನಿಮಿಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net