ಸೋಮೇಶ್ವರ ಶುಗರ್ಸ್‌ಗೆ ರಾಜು ಉಪಾಧ್ಯಕ್ಷ

21blh5 raju kudasamannavar
Published on

ಬೈಲಹೊಂಗಲ: ಸಮೀಪದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾಗಿ ರಾಜು (ಮಹಾಬಳೇಶ್ವರ) ಬಸವರಾಜ ಕುಡಸೋಮಣ್ಣವರ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಕಾರ್ಖಾನೆಯ ಹಿಂದಿನ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಅವರು ರಾಜಿನಾಮೆ ಸಲ್ಲಿಸಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಇವರೋರ್ವರೆ ಕಣದಲ್ಲಿ ಉಳಿದಿದ್ದರಿಂದ ಅವರ ಆಯ್ಕೆಯನ್ನು ಚುನಾವಣಾಕಾರಿ, ಸಹಕಾರಿ ಸಂಘಗಳ ಸಹಾಯಕ ಉಪನಿಭಂದಕಿ ಶಾಹೀನ್ ಅಕ್ತರ ಘೋಷಿಸಿದರು.

ಬಳಿಕ ಮಾತನಾಡಿದ ರಾಜು ಕುಡಸೋಮಣ್ಣವರ, ಈಗಾಗಲೇ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಆಡಳಿತ ಮಂಡಳಿಯ ಸಹಕಾರದೊಂದಿಗೆ ಸಂಸ್ಥೆಯ ಕಬ್ಬು ಅರಿಯುವ ಸಾಮರ್ಥ್ಯ ಹೆಚ್ಚಿಸುವ, ವಿದ್ಯುತ್ತ ಉತ್ಪಾದನೆಯ ಘಟಕ ಅಳವಡಿಸುವ ಮಹತ್ವದ ಕಾರ್ಯಗಳನ್ನು ಮಾಡಲು ಶ್ರಮಿಸುತ್ತೇನೆ ಎಂದರು.

ಅಧ್ಯಕ್ಷ ಬಸವರಾಜ ಬಾಳೆಕುಂದರಗಿ ಹಾಗೂ ಎಲ್ಲ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net