ರೋಗಿ ಸಂಬಂಧಿಕರೇ ಎಳೆಯಬೇಕು ಸ್ಟ್ರೆಚರ್!

14CHN4
Published on


ಚಾಮರಾಜನಗರ : ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳನ್ನು ಸ್ಟ್ರೆಚರ್‌ನಲ್ಲಿ ಸಾಗಿಸಲು ಕೆಲ ಸಿಬ್ಬಂದಿ ದರ್ಪ ತೋರುತ್ತಿದ್ದು, ಅನಿವಾರ್ಯವಾಗಿ ರೋಗಿಗಳ ಸಂಬಂಧಿಕರೇ ಸ್ಟ್ರೆಚರ್ ಎಳೆಯುತ್ತಿದ್ದಾರೆ. ಆಯತಪ್ಪಿ ಬಿದ್ದು ಪ್ರಜ್ಞೆ ತಪ್ಪಿದ್ದ ತಾಲೂಕಿನ ಚೆನ್ನೀಪುರಮೋಳೆ ಗ್ರಾಮದ ಸಿದ್ದರಾಜು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ವೈದ್ಯರ ವಾರ್ಡ್‌ಗೆ ಕರೆದೊಯ್ಯುಲು ಸ್ಟ್ರೆಚರ್ ನೆರವು ನೀಡಬೇಕೆಂದು ಸಂಬಂಧಿಕರು ಸಿಬ್ಬಂದಿಯೊಬ್ಬರಿಗೆ ಕೇಳಿಕೊಂಡಾಗ ಸಹಕರಿಸಲು ನಿರಾಕರಿಸಿದ್ದಾರೆ. ನಂತರ ರೋಗಿಯ ಕಡೆಯವರೇ ಸಿದ್ದರಾಜು ಅವರನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿಕೊಂಡು ಆಸ್ಪತ್ರೆಯ ಆವರಣದಲ್ಲಿ ಎಳೆದುಕೊಂಡು ಹೋದರು. ಸದ್ಯ ಐಸಿಯು ವಾರ್ಡ್‌ನಲ್ಲಿ ಸಿದ್ದರಾಜು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕಡ್ಡಾಯವಾಗಿ ರೋಗಿಗಳಿಗೆ ಸ್ಪಂದಿಸಬೇಕು, ಸ್ಟ್ರೆಚರ್ ಎಳೆಯಲು ಬೇರೆಯವರನ್ನು ಬಿಡಬಾರದು ಎಂದು ಸೂಚನೆ ನೀಡಲಾಗಿದೆ. ಹಾಗಿದ್ದರೂ ಇಂತಹ ಘಟನೆಗಳು ನಡೆಯುತ್ತಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಕೃಷ್ಣಪ್ರಸಾದ್ ವಿಜಯವಾಣಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net