ದ.ಕ ಜಿಲ್ಲೆಯಲ್ಲಿ ರಾತ್ರಿ ನಿರ್ಬಂಧದಲ್ಲಿ ಮಾರ್ಪಾಡು; ನಾಳೆಯಿಂದ 9 ಗಂಟೆ ವರೆಗೆ ಅಂಗಡಿ ತೆರೆದಿಡಲು ಅವಕಾಶ

IMG-20220729-WA0046
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಂಜೆ 6ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಅಂಗಡಿ ಮುಂಗಟ್ಟುಗಳು ಮುಚ್ಚುವ ಕುರಿತಂತೆ ಇದ್ದ ಆದೇಶವನ್ನು ಮಾರ್ಪಾಡು ಮಾಡಲಾಗಿದೆ. ಶುಕ್ರವಾರದಿಂದ ರಾತ್ರಿ 9 ಗಂಟೆ ವರೆಗೆ ಅಂಗಡಿ ತೆರೆದಿಡಲು ಅವಕಾಶ ಕಲ್ಪಿಸಲಾಗಿದ್ದು, 9ರಿಂದ ಬೆಳಗ್ಗೆ 6ಗಂಟೆ ವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಹೊಸ ಆದೇಶ ತಿಳಿಸಿದ್ದಾರೆ. ಇದೇ ವೇಳೆ ಮದ್ಯದಂಗಡಿಗಳೂ ಶುಕ್ರವಾರದಿಂದ ತೆರೆದುಕೊಳ್ಳಲಿದ್ದು, ಸಂಜೆ 6 ಗಂಟೆ ವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ. ಉಳಿದ ನಿರ್ಬಂಧಗಳು ಯಥಾ ಸ್ಥಿತಿ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net