ಕೆಲವು ರಾಜಕಾರಣಿಗಳಿಂದ ಸಮಾಜದ ಸ್ವಾಸ್ಥೃ ಹಾಳು

Some politicians are destroying the health of society
ಮಹಾಲಿಂಗಪುರಕ್ಕೆ ಭೇಟಿ ನೀಡಿದ ಶಾಸಕ ವೈ.ಎಸ್.ವಿ.ದತ್ತಾ ಮಾಧ್ಯಮದವರೊಂದಿಗೆ ಮಾತನಾಡಿದರು. ಎಪಿಎಂಸಿ ಹಾಗೂ ಇತರೆ ಕಾರ್ಮಿಕರು ಇದ್ದರು.
Published on

ಮಹಾಲಿಂಗಪುರ: ಮತ ನೀಡಿ ಆಶೀರ್ವದಿಸಿದ ಜನತೆಯ ಸೇವೆ ಮರೆತ ಇಂದಿನ ರಾಜಕಾರಣಿಗಳು ಸಾಮಾಜಿಕ ಸೂಕ್ಷ್ಮತೆ ಮರೆತು, ಅಸಭ್ಯವಾಗಿ ಮಾತನಾಡುತ್ತ ಪ್ರಜಾಪ್ರಭುತ್ವದ ತಳಹದಿಯೇ ಅಲ್ಲಾಡುವ ರೀತಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಎಪಿಎಂಸಿ ದಲಾಲ ವರ್ತಕರ ಸಂಘದ ಸಭಾಭವನದಲ್ಲಿ ಭಾನುವಾರ ಕಾರ್ಮಿಕರ ಪರವಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸುವ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದರು.

ಆರು ದಶಕಗಳ ಹಿಂದಿನ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಸಾಮಾಜಿಕ ನ್ಯಾಯ, ತತ್ವ, ಸಿದ್ಧಾಂತಗಳಡಿ ರಾಜಕಾರಣವೇ ಬೇರೆ. ಇಂದಿನ ರಾಜಕಾರಣವೇ ಬೇರೆ. ಅಂದಿನ ರಾಜಕೀಯ ದೇಶ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಸಮಾನತೆ ಹೊಂದಬೇಕೆಂಬ ಉದ್ದೇಶ ಹೊಂದಿತ್ತು. ಇಂದು ಕೆಲವು ರಾಜಕಾರಣಿಗಳಿಂದ ನೆಮ್ಮದಿ ವಾತಾವರಣ ಹದಗೆಟ್ಟು ಹೋಗಿದೆ. ಇಂದು ವಿಧಾನಸೌಧದಲ್ಲಿ, ಸಾರ್ವಜನಿಕವಾಗಿ ರಾಜಕಾರಣಿಗಳು ಕೇವಲ ಪರಸ್ಪರ ಹೊಗಳಿಕೆ, ತೆಗಳಿಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದ ಬಡವರ, ಮಧ್ಯಮ ವರ್ಗದ, ಕಾರ್ಮಿಕರ ಕಲ್ಯಾಣ ಕಾರ್ಯ ಮೊಟಕುಗೊಳ್ಳುತ್ತಿದೆ ಎನಿಸುತ್ತಿದೆ. ಈ ವ್ಯವಸ್ಥೆ ವಿರುದ್ಧ ಸರ್ಕಾರದ ಮಟ್ಟದಲ್ಲಿ ನನ್ನ ಹೋರಾಟ ಮುಂದುವರಿಯಲಿದೆ. ಪಟ್ಟಣ ಪ್ರದೇಶ, ಹಿಂದುಳಿದ ಗ್ರಾಮೀಣ ಪ್ರದೇಶಗಳು ಮೂಲಭೂತ ಸಮಸ್ಯೆಗಳಿಂದ ನಲುಗುತ್ತಿವೆ. ರಾಜಕಾರಣಿಗಳು ಅವುಗಳ ಕುರಿತು ಆರೋಗ್ಯಕರ ಚರ್ಚೆ ಮಾಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net