ಕೆಲವರು ಸಾಕಷ್ಟು ತಪ್ಪು ಮಾಡಿದ್ದರೂ ಗೆಲ್ಲುತ್ತಾರೆ

C.C. PATIL.
Published on

ಹುಬ್ಬಳ್ಳಿ: ಕೆಲವೊಮ್ಮೆ ನಿರೀಕ್ಷಿಸಿದ ಫಲಿತಾಂಶ ಸಿಗುವುದಿಲ್ಲ. ನಮ್ಮ ತಪ್ಪು ಇರದಿದ್ದರೂ ಕೆಲ ಬಾರಿ ಸೋಲು ಆಗುತ್ತದೆ. ಕೆಲವರು ಸಾಕಷ್ಟು ತಪ್ಪು ಮಾಡಿದ್ದರೂ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಉಪ ಚುನಾವಣೆ ಫಲಿತಾಂಶ ವಿಶ್ಲೇಷಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಜನರು ಆಡಳಿತ ಪಕ್ಷದ ಪರವಾಗಿ ಇರುತ್ತಾರೆ. ಈ ಚುನಾವಣೆಯಲ್ಲಿ ಸಚಿವರ, ಶಾಸಕರ ಹಾಗೂ ಸಂಪನ್ಮೂಲಗಳ ಹೇರಳ ಬಳಕೆಯಾಗಿದೆ ಎಂದರು.

ಶಿಗ್ಗಾಂವಿ ಕ್ಷೇತ್ರದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಇದೀಗ ಗೆಲುವು ಸಾಧಿಸಿರುವ ಕಾಂಗ್ರೆಸ್​ನ ಯಾಸೀರ್​ಖಾನ್ ಪಠಾಣಗೆ ಅಭಿವೃದ್ಧಿ ಮಾಡಲು ಯಾವುದೇ ಕೆಲಸ ಬಾಕಿ ಉಳಿದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net