ಕೆಲವರು ಕುತಂತ್ರದಿಂದ ಯತ್ನಾಳ ಉಚ್ಚಾಟನೆ

Some people are trying to expel Yathna through cunning.
ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿರುವುದನ್ನು ಖಂಡಿಸಿ ಗುಳೇದಗುಡ್ಡದಲ್ಲಿ ಪಂಚಮಸಾಲಿ ಸಮಾಜ ಹಾಗೂ ವಿವಿಧ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Published on

ಗುಳೇದಗುಡ್ಡ: ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜಕೀಯವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಿರುವುದನ್ನು ನೋಡಿ ಸಹಿಸದೆ ತಾವೇ ಅಧಿಕಾರ ಅನುಭವಿಸಬೇಕು ಎಂದು ಕೆಲವರು ಕುತಂತ್ರದಿಂದ ಅವರನ್ನು ಬಿಜೆಪಿಯಿಂದ ಹೊರಗೆ ಹಾಕಿದ್ದಾರೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಚಿಲ್ಲಾಪೂರ ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿರುವುದನ್ನು ಖಂಡಿಸಿ ಶುಕ್ರವಾರ ತಾಲೂಕು ಪಂಚಮಸಾಲಿ ಸಮಾಜ ಹಾಗೂ ವಿವಿಧ ಹಿಂದುಪರ ಸಂಘಟನೆ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ಶಕುನಿಗಳು ಪಂಚಮಸಾಲಿ ಸಮಾಜದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೆಳೆಯಲು ಬಿಡುತ್ತಿಲ್ಲ ಎಂದು ಜರಿದರು.

ಕೇಂದ್ರದ ನಾಯಕರು ಯತ್ನಾಳ ಅವರ ಉಚ್ಚಾಟನೆ ಆದೇಶ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವ ಮೂಲಕ ಯತ್ನಾಳವರಿಗೆ ಬಲ ತುಂಬುತ್ತೇವೆ. ಹೀಗೆ ಮುಂದುವರಿದರೆ ಅಪ್ಪ, ಮಗ ಮತ್ತು ಪಕ್ಷ ಪಶ್ಚಾತಾಪ ಅನುಭವಿಸಬೇಕಾಗುತ್ತದೆ ಎಂದರು.

ತಾಲೂಕು ಪಂಚಮಸಾಲಿ ಸಮಾಜ ಹಾಗೂ ವಿವಿಧ ಹಿಂದು ಪರ ಸಂಘಟನೆಗಳಿಂದ ಪಟ್ಟಣದ ಬನ್ನಿಕಟ್ಟಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ, ಸರ್ಾ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ ಮೂಲಕ ಹಾಯ್ದು ಪುರಸಭೆ ಎದರು ಸಭೆ ಸೇರಿತು.

ಬಳಿಕ ಪ್ರತಿಭಟನಾಕಾರರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರಗಳಿಗೆ ಬೆಂಕಿಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಕಾರ್ಯಾಧ್ಯಕ್ಷ ಪ್ರಕಾಶ ಮುರಗೋಡ, ಕಾರ್ಯದರ್ಶಿ ಮಹಾಂತೇಶ ಜಿರ್ಲಿ, ಶಿವಯೋಗೆಪ್ಪ ಮುರಗೋಡ, ಪ್ರಕಾಶ ಕಳ್ಳಿಗುಡ್ಡ, ಬಸವರಾಜ ಹುಂಡೇಕಾರ, ವಿರುಪಾಕ್ಷಪ್ಪ ಮ್ಯಾಗೇರಿ, ಅಶೋಕ ಕಳ್ಳಿಗುಡ್ಡ, ಸಾಗರ ಕೊಕಾಟೆ, ಮುತ್ತು ಕಾಳನ್ನವರ, ಗಂಗಪ್ಪ ಚಿನ್ನನ್ನವರ, ಮಹೇಶ ಸೂಳಿಭಾವಿ, ಮುತ್ತು ಲಗಳಿ, ಮಲ್ಲನಗೌಡ ಗೌಡ್ರ, ವಿರೂಪಾಕ್ಷಿ ಕಳ್ಳಿಗುಡ್ಡ, ಮಲ್ಲು ಬೆಳವಣಿಕಿ, ರಂಗಪ್ಪ ಅಮರಣ್ಣವರ, ಗುರು ಅಂಗಡಿ, ಮಹೇಶ ಪಾಟೀಲ, ಶಿವು ತುಪ್ಪದ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net