

ಕಲಘಟಗಿ: ತಾಲೂಕಿನಲ್ಲಿ ವಾರ ಪೂರ್ತಿ ಸುರಿಯುತ್ತಿರುವ ನಿರಂತರ ಮಳೆಗೆ ಹಲವು ಗ್ರಾಮಗಳ ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ಭಾಗಕ್ಕೆ ಸಂರ್ಪಸುವ ಕೆಳಮಟ್ಟದ ಹಲವು ಸೇತುವೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ಕಲಘಟಗಿ-ಹಳಿಯಾಳಕ್ಕೆ ಸಂಚರಿಸುವ ರಾಜ್ಯ ಹೆದ್ದಾರಿ ಸಂಗಮೇಶ್ವರ ಗ್ರಾಮದ ಹತ್ತಿರದ ಮಂಗ್ಯಾನ ಹಳ್ಳ ಸೇತುವೆ ನಿರಂತರ ಮಳೆಗೆ ತುಂಬಿ ಹರಿಯುತ್ತಿದೆ. ಗಡಿ ಜಿಲ್ಲೆಯ ಹಳಿಯಾಳಕ್ಕೆ ಹಾಗೂ ತಾಲೂಕಿನ ಹಲವು ಗ್ರಾಮಕ್ಕೆ ಸಂಚಾರ ಒದಗಿಸುತ್ತದೆ ಪ್ರತಿ ವರ್ಷ ಮಳೆಗಾಲ ಬಂತೆದರೆ ನೀರು ಹರಿಯುತ್ತಿರುವದರಿಂದ ವಾಹನ ಸವಾರರಿಗೆ ಪರದಾಡುತ್ತಿದ್ದಾರೆ. ಬೆಳೆಗಳು ನೀರಲ್ಲಿ ನಿಂತು ಕೊಳೆಯುವ ಹಂತಕ್ಕೆ ಹೋಗುತ್ತಿವೆ.
ಮುತ್ತಗಿ ಗ್ರಾಮದ ಸೇತುವೆ ಜಲಾವೃತ: ತಾಲೂಕಿನ ಮುತ್ತಗಿ ಗ್ರಾಮದ ಹತ್ತಿರ ಇರುವ ರಾಜ್ಯ ಹೆದ್ದಾರಿ ಸೇತುವೆ ಮಳೆಯಿಂದ ಜಲಾವೃತಗೊಂಡು ಹರಿಯುತ್ತಿದೆ. ಕಲಘಟಗಿ, ಹುಲ್ಲಂಬಿ, ಮುತ್ತಗಿ, ಗಂಬ್ಯಾಪುರ ಗ್ರಾಮಗಳಿಂದ ಧಾರವಾಡ, ಹುಬ್ಬಳ್ಳಿ ಹಾಗೂ ಸುತ್ತಲಿನ ವಿವಿಧ ಗ್ರಾಮಕ್ಕೆ ಸಂಚರಿಸುವ ಒಳ ರಸ್ತೆ ಇದಾಗಿದೆ. ಇದೀಗ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಸೇತುವೆ ದಾಟಲು ಜನರು ಪರದಾಡುತ್ತಿದ್ದಾರೆ. ಹಿರೇಹೊನ್ನಳ್ಳಿ, ಬೇಗೂರ, ಬಿಸರಳ್ಳಿ ಗ್ರಾಮಕ್ಕೆ ಸಂಚರಿಸುವ ಒಳ ರಸ್ತೆಯ ಸೇತುವೆ ಮಳೆಗೆ ನೀರು ಹರಿಯುತ್ತಿರುವುದರಿಂದ ಜನರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ.