ವರ್ತಕರ ಸಂಘದ ನಿರ್ಣಯಕ್ಕೆ ಕೆಲವರಿಂದ ಅಪಸ್ವರ

JLY., 11, HNP., PH.1.
Published on

ಹೊಳೆನರಸೀಪುರ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಧ್ಯಾಹ್ನ ಒಂದು ಗಂಟೆ ನಂತರ ವಹಿವಾಟು ಬಂದ್ ಮಾಡುವ ವರ್ತಕರ ಸಂಘದ ನಿರ್ಣಯಕ್ಕೆ ಕೆಲ ವ್ಯಾಪಾರಿಗಳಿಂದ ಅಪಸ್ವರ ವ್ಯಕ್ತವಾಗಿದೆ.

ಪಟ್ಟಣದ ವಿವಿಧ ವಾರ್ಡ್‌ಗಳ 16 ರಸ್ತೆಗಳು, ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾ ಗಿದೆ. ಹೀಗಾಗಿ ಪಟ್ಟಣದಲ್ಲಿ ಮಧ್ಯಾಹ್ನಾದ ಬಳಿಕ ಅಂಗಡಿಗಳನ್ನು ಬಂದ್ ಮಾಡಲು ವರ್ತಕರ ಸಂಘ ತೀರ್ಮಾನ ಮಾಡಿತ್ತು.

ಈ ನಡುವೆ ಪಟ್ಟಣದ ಸುಭಾಷ್ ವೃತ್ತ ಮತ್ತು ಪೇಟೆ ಮುಖ್ಯ ರಸ್ತೆಯಲ್ಲಿ 20 ವರ್ಷಗಳಿಂದ ವ್ಯಾಪಾರದಲ್ಲಿ ತೊಡಗಿರುವ ಕೆಲವು ದಿನಸಿ ವರ್ತಕರು, ಮೂರು ಗಂಟೆಯಾದರೂ ಬಾಗಿಲು ಮುಚ್ಚದೆ ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಸಾರ್ವಜನಿಕರು ಹಾಗೂ ಗ್ರಾಹಕರ ಹಿತಾಸಕ್ತಿಗಾಗಿ ಸಂಘ ಕೈಗೊಂಡ ನಿರ್ಣಯನ್ನು ಪಾಲಿಸದೆ ಕೆಲವರು ವ್ಯಾಪಾರ ಮಾಡುತ್ತಿರುವುದು ವರ್ತಕರಿಗೆ ಬೇಸರ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net