ಸಕಾರಾತ್ಮಕ ಚಿಂತನೆ ಹೆಚ್ಚಿಸುವ ಚಟುವಟಿಕೆ ಮುಖ್ಯ

SMPT- BK 1
Published on

ಶಾಸಕ ಡಾ.ಮಂಥರ್‌ಗೌಡ ಅಭಿಮತ- ದ್ವಾದಶ ಜ್ಯೋತಿರ್ಲಿಂಗ ದರ್ಶನ

ಸೋಮವಾರಪೇಟೆ : ಸಕಾರಾತ್ಮಕ ಭಾವನೆ ಮತ್ತು ಚಿಂತನೆಗಳನ್ನು ಹೆಚ್ಚುಸುವ ಚಟುವಟಿಕೆಗಳಿಂದ ಉನ್ನತಿ ಸಾಧ್ಯ ಎಂದು ಶಾಸಕ ಡಾ.ಮಂಥರ್‌ಗೌಡ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಪಟ್ಟಣದ ಅಟಿಲ್‌ಜೀ ಕನ್ನಡ ಭವನದಲ್ಲಿ ನವರಾತ್ರಿ ಪ್ರಯುಕ್ತ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ವೀಕ್ಷಿಸಿ ಭಾನುವಾರ ಅವರು ಮಾತನಾಡಿದರು.
ಸಮಾಜದಲ್ಲಿ ನಕಾರಾತ್ಮಕ ಭಾವನೆಗಳು ಮಿತಿಮೀರಿ ಬೆಳೆಯುತ್ತಿವೆ. ಇದರಿಂದ ಅನಾರೋಗ್ಯ ಹೆಚ್ಚುತ್ತಿದೆ. ಮೂಢ ನಂಬಿಕೆಗಳು, ಅಜ್ಞಾನವು ಹೆಚ್ಚುತ್ತಿದೆ.ಯುವಜನರು ಇದರಿಂದ ಹಾದಿ ತಪ್ಪುತ್ತಿದ್ದಾರೆ. ಈ ಸಂದರ್ಭದಲ್ಲಿ
ಈಶ್ವರೀಯ ವಿವಿ ಕಾರ್ಯ ಚಟುವಟಿಕೆಗಳು ದಾರಿದೀಪವಾಗಿವೆ ಎಂದು ಅವರು ಹೇಳಿದರು.
ದಿನದ ಒಂದು ಗಂಟೆಯಾದರೂ ಪ್ರವಚನ ಕೇಳುವುದು ಮತ್ತು ರಾಜಯೋಗ ಮಾಡಿದರೆ ನೆಮ್ಮದಿ ಕಾಣಲು ಸಾಧ್ಯ ಎಂದ ಅವರು, ನೀತಿ ಶಿಕ್ಷಣದೊಂದಿಗೆ ವ್ಯಸನಮುಕ್ತ ಆಂದೋಲನ ಯೋಜನೆ ಮೂಲಕ ಈಶ್ವರೀಯ ವಿವಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದರು. ವಿವಿ ಹಿರಿಯ ಕಾರ್ಯಕರ್ತ ಬಿ.ಕೆ. ಪ್ರಾಣೇಶ್ ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು ಹಾಜರಿದ್ದರು.
ಇಂದಿನಿಂದ ಪ್ರವಚನ ಸರಣಿ:

ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಕಾರ್ಯಕ್ರಮಕ್ಕೆ ಸೋಮವಾರ ತೆರೆ ಬೀಳಲಿದೆ. ಅಟಿಲ್‌ಜೀ ಕನ್ನಡ ಭವನದಲ್ಲಿ ಅ. 13ರಿಂದ 20ರವರೆಗೆ ಪ್ರವಚನ ಸರಣಿ ಆರಂಭಗೊಳ್ಳಲಿದೆ. ಬೆಳಗ್ಗೆ 6.30ರಿಂದ 8 ಹಾಗು 10 .30ರಿಂದ 12, ಸಂಜೆ 4ರಿಂದ 5 ಮತ್ತು 6.30ರಿಂದ 8ರವರೆಗೆ ಮಕ್ಕಳು, ಯುವಕರು ಮತ್ತು ಸಾರ್ವಜನಿಕರಿಗಾಗಿ ಪ್ರವಚನ ಹಮ್ಮಿಕೊಳ್ಳಲಾಗಿದೆ. ನೆಮ್ಮದಿಯ ಜೀವನಕ್ಕೆ ಧ್ಯಾನವೇ ದಿವ್ಯ ಔಷಧ - ವಿಷಯ ಕುರಿತು ಈಶ್ವರೀಯ ವಿವಿ ಹಿರಿಯ ಕಾರ್ಯಕರ್ತ ಬಿ.ಕೆ. ಪ್ರಾಣೇಶ್ ಮಾತನಾಡಲಿದ್ದಾರೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net