

ಹಿರಿಕರ ರವಿ ಸೋಮವಾರಪೇಟೆ
ಹಲವು ಸಮಸ್ಯೆಗಳಿಂದ ಬಜೆಗುಂಡಿ ನಿವಾಸಿಗಳು ನರಳುತ್ತಿದ್ದಾರೆ. ಮಳೆಗಾಲದ ನರಕಯಾತನೆಯ ನಮ್ಮ ಬದುಕು ಶತ್ರುಗಳಿಗೂ ಬರಬಾರದೆಂದು ಕಾಲನಿಯ ಕೆಳ ಭಾಗದಲ್ಲಿ ವಾಸಿಸುತ್ತಿರುವ ನಿವಾಸಿಗಳು ತೋಡಿಕೊಂಡರು.
ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಕ್ಷೇತ್ರ ಸಂಚಾರದಲ್ಲಿ ಬಜೆಗುಂಡಿ ಕಾಲನಿ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡರು.
ಬಜೆಗುಂಡಿ ಕಾಲನಿಯಲ್ಲಿ ೪೮೦ ಕುಟುಂಬ ವಾಸಿಸುತ್ತಿದ್ದು, ೩೫೦೦ ಜನಸಂಖ್ಯೆ ಇದೆ. ಶೇ.೯೫ ರಷ್ಟು ಕೂಲಿ ಕಾರ್ಮಿಕರಿದ್ದಾರೆ. ಉದ್ಯೋಗ ದಲ್ಲಿದ್ದವರು, ವ್ಯಾಪಾರ ವವಾಟು ಮಾಡಿಕೊಂಡವರು ವಾಸಿಸಲು ಯೋಗ್ಯವಾದ ಮನೆ ರ್ನಿುಸಿಕೊಂಡಿದ್ದಾರೆ, ಇನ್ನುಳಿದ ಬಹುತೇಕ ಮನೆ ವಾಸಿಸಲು ಯೋಗ್ಯವಾಗಿಲ್ಲ ಎಂಬುದು ನಿವಾಸಿಗಳ ಅಳಲು.
೬೦ ವರ್ಷ ಹಿಂದೆ ಬಡವರು, ಕೂಲಿ ಕಾರ್ಮಿಕರು ಖಾಲಿ ಇರುವ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಕ್ರಮೇಣ ಮನೆಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಆರ್‌ಟಿಸಿಯಲ್ಲಿ ಅರಣ್ಯ ಎಂದು ದಾಖಲಾದ ಹಿನ್ನೆಲೆಯಲ್ಲಿ ನಿವಾಸಿಗಳಿಗೆ ಹಕ್ಕುಪತ್ರಗಳು ಸಿಕ್ಕಿರಲಿಲ್ಲ. ಆನೇಕ ದಶಕಗಳ ಹೋರಾಟದ ಪರಿಣಾಮ ಅರಣ್ಯ ಹಕ್ಕು ಸಮಿತಿ ಮೂಲಕ ೩೩೫ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿದೆ. ಬಜೆಗುಂಡಿ ಕಾಲನಿಯಲ್ಲಿ ಕೆಲ ಭಾಗದಲ್ಲಿ ಕಾಂಕ್ರೀಟ್ ರಸ್ತೆಯಾಗಿದೆ. ಇನ್ನು ಕೆಲ ಕಡೆ ರಸ್ತೆ ಮಾಡಬೇಕಾಗಿದೆ.
ಮಳೆಗಾಲದಲ್ಲಿ ಬರೆ ಕುಸಿಯುವ ಭೀತಿ ಎದುರಾಗುತ್ತಿದೆ. ಒಂದು ದಶಕಗಳ ಈಚೆಗೆ ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿಯುತ್ತಿರು
ವುದರಿಂದ ಬರೆಗಳು ಕುಸಿಯುತ್ತಿವೆ. ಪ್ರತಿವರ್ಷ ೧೦ ರಿಂದ ೧೫ ಮನೆ ಕುಸಿದು ಬೀಳುತ್ತಿವೆ. ಬರೆಗಳು ಕುಸಿಯುತ್ತಿವೆ. ಪಂಚಾಯಿತಿ ಅನುದಾನದಲ್ಲಿ ಹೆಚ್ಚಿನ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಥಳೀಯ ಜನಪ್ರತಿನಿಧಿಗಳ ಅಸಹಾಯಕತೆ.
ಹಕ್ಕುಪತ್ರಗಳಿಲ್ಲದರಿಂದ ಅನೇಕರಿಗೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅನುದಾನದ ಕೊರತೆಯಿಂದ ಬಹುತೇಕ ಕಡೆ ಚರಂಡಿ ನಿರ್ಮಿಸಲು ಸಾಧ್ಯವಾಗಿಲ್ಲ. ಚರಂಡಿ ಕೊಳಚೆ ನೀರು ಸಂಗ್ರಹವಾಗಿ, ಅಶುಚಿತ್ವ ತಾಂಡವಾಡುತ್ತಿದೆ. ಸೊಳ್ಳೆಗಳ ಆವಾಸ ಸ್ಥಾನ ವಾಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿಯೂ ಇದ್ದೆ ಇರುತ್ತದೆ.
ಅತೀ ಹೆಚ್ಚು ಕಸ ಈ ಕಾಲನಿಯಲ್ಲಿ ಉತ್ಪತಿಯಾಗುತ್ತಿದೆ. ಆದರೆ, ಕಸವಿಲೇವಾರಿ ಘಟಕ ನಿರ್ಮಾಣವಾಗಿಲ್ಲ. ಘಟಕಕ್ಕೆ ಜಾಗವೂ ಇದೆ. ಅಡಿಪಾಯ ತೆಗೆಯಲಾಗಿದೆ. ಕಾಮಗಾರಿ ಪ್ರಾರಂಭವಾಗಿಲ್ಲ. ಪಂಚಾುತಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಸಿಲ್ಲ ಎಂಬ ಆರೋಪವೂ ಕೇಳಿ ಬಂತು.
ಕಾಲನಿಯಲ್ಲಿ ಬಹುತೇಕ ವಿದ್ಯುತ್ ಕಂಬಗಳು ಹಾಳಾಗಿವೆ. ಮಳೆಗಾಲದಲ್ಲಿ ಕಂಬಗಳು ಮನೆ ಮೇಲೆ ಮುರಿದು ಬೀಳುವ ಆತಂಕವನ್ನು ನಿವಾಸಿಗಳು ವ್ಯಕ್ತ ಪಡಿಸಿದರು. ಸೆಸ್ಕ್‌ಗೆ ಅರ್ಜಿ ಕೊಟ್ಟರು ಹೊಸ ಕಂಬ ಹಾಕಿ ವಿದ್ಯುತ್ ಮಾರ್ಗ ದುರಸ್ತಿ ಪಡಿಸುತ್ತಿಲ್ಲ ಎಂದು ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಅಸಮಧಾನ ವ್ಯಕ್ತ ಪಡಿಸಿದರು.
ಕಾಲನಿಯ ಕೆಲ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಕೂಡ ಇಲ್ಲ. ಬಹುತೇಕ ಕುಟುಂಬಗಳು ಕೂಲಿ ಕೆಲಸವನ್ನೇ ನಂಬಿ ಬದುಕುವಂತಾಗಿದೆ. ಹೋರಾಟ ಮಾಡಿ ಸೌಲಭ್ಯ ಪಡೆಯುವ ಶಕ್ತಿ ಇಲ್ಲಿನವರಿಗಿಲ್ಲ. ಗ್ರಾಮ ಪಂಚಾುತಿಯ ಅನುದಾನ ಸಣ್ಣಪುಟ್ಟ ಕಾಮಗಾರಿ ಮಾಡಲು ಸಾಧ್ಯ ವಾಗುತ್ತಿಲ್ಲ. ಸರ್ಕಾರ ವಾರ್ಷಿಕ ೨೫ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದರೆ, ಬರೆ ಕುಸಿಯುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಬಹುದೆಂದು ಹಿರಿಯರು ಹೇಳಿದರು.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನ ಬಾಣೆಯಲ್ಲೂ ಸಮಸ್ಯೆಗಳಿವೆ. ಚರಂಡಿ ವ್ಯವಸ್ಥೆ ಆಗಬೇಕು. ಚರಂಡಿ ನೀರು ಭತ್ತ ಗದ್ದೆಭೂಮಿಗೆ ಸೇರುತ್ತಿದೆ. ಇದ್ಕಕೂ ಶಾಶ್ವತ ಪರಿಹಾರ ಕಂಡು ಡಿಯಬೇಕಿದೆ ಎಂದು ನಿವಾಸಿಗಳು ಹೇಳಿದರು.
**
ಹಾಲಿ ಆಡಳಿತ ಮಂಡಳಿ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಶಾಸಕರ ಸಹಕಾರದಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿ
ದೆ. ರಸ್ತೆಗೆ ಕಾಂಕ್ರೀಟಿಕರಣ ಮಾಡಲಾಗುತ್ತಿದೆ. ಶವ ಸಂಸ್ಕಾರಕ್ಕೆ ಚೇಂಬರ್ ಆಳವಡಿಸಲಾಗುತ್ತಿದೆ. ವಿದ್ಯುತ್ ಮಾರ್ಗ ದುರಸ್ತಿ ಪಡಿಸಬೇಕು. ತಡೆಗೋಡೆ ನಿರ್ಮಾಣ ಮಾಡಬೇಕು. ಹಕ್ಕುಪತ್ರ ನೀಡಿರುವುದರಿಂದ ಜನರ ಜೀವನ ಸುಧಾರಿಸಲಿದೆ. ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ಅದ್ಯತೆ ನೀಡಲಾಗಿದೆ. ಬಿ.ಎಂ. ಪ್ರಶಾಂತ್, ಅಧ್ಯಕ್ಷರು, ಬೇಳೂರು ಗ್ರಾಮ ಪಂಚಾಯಿತಿ.
**
ಕಾಲನಿ ಒಳಗೆ ಎರಡು ರಾಜಕಾಲುವೆಗಳು ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಅಂತಹ ಸಂದರ್ಭಗಳಲ್ಲಿ ಬರೆ ಕುಸಿಯುತ್ತದೆ. ಈಗಾಗಲೆ ಕಿರುಸೇತುವೆ ನಿರ್ಮಿಸಲಾಗಿದೆ. ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಜನರ ಬೇಡಿಕೆ ಈಡೇರಿಸುವ ಪ್ರಯತ್ನ ನಡೆಯುತ್ತಿದೆ. ಎ.ಜೆ. ತಿಮ್ಮಪ್ಪ ನಾಯಕ್, ವಾರ್ಡ್ ಸದಸ್ಯ.
**
ನಮ್ಮ ಕುಟುಂಬಕ್ಕೆ ಇನ್ನು ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ. ನಮಗೆ ಸರ್ಕಾರದ ಪಡಿತರ ಸಿಗುತ್ತಿಲ್ಲ. ಕೂಲಿ ಮಾಡಿ ಬದುಕಬೇಕು. ಕಂದಾಯ ಇಲಾಖೆಯವರು ಪಡಿತರ ಚೀಟಿ ಕೊಡುವುದಕ್ಕೆ ಮುಂದೆ ಬರುತ್ತಿಲ್ಲ. ನಾವೇನೂ ಪಾಪ ಮಾಡಿದ್ದೇವೆ. ನಮಗೆ ಬದುಕುವ ಹಕ್ಕಿಲ್ಲವೆ. ಬಡವರ ಮನೆಗೆ ಬಂದು ಮಾಹಿತಿ ಪಡೆದು ಕಾರ್ಡ್ ಮಾಡಿಕೊಡಬೇಕು. ಅಕ್ಕು, ವೃದ್ದೆ, ಕಾಲನಿ ನಿವಾಸಿ.
**
ಮನೆ ಮೇಲೆ ಮರ ಬೀಳುವ ಆತಂಕವಿದೆ. ಮರ ಕಡಿಯುವಂತೆ ಜಾಗದ ಮಾಲೀಕರಿಗೆ ಹೇಳಿದರೂ ಮರ ಕಡಿಯುತ್ತಿಲ್ಲ. ಈ ಬಗ್ಗೆ ಪಂಚಾಯಿತಿ ಆಡಳಿತ ಕ್ರಮಕೈಗೊಳ್ಳಬೇಕು. ಮನೆ ಸುತ್ತ ಬರೆ ಕುಸಿಯುವ ಭೀತಿ ಇದೆ. ಇನ್ನಾದರು ತಡೆಗೋಡೆ ನಿರ್ಮಿಸಿಕೊಡಬೇಕು.
ಲೀಲಾ ಶಂಕರ್, ಬಜೆಗುಂಡಿ ಕಾಲನಿ ನಿವಾಸಿ.
**
೪೦ ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇನೆ. ಸರ್ಕಾರ ಬಡವರಿಗೆ ಮನೆ ನಿರ್ಮಿಸಿಕೊಡಬೇಕು. ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪ್ರತಿವರ್ಷ ಮನೆಗಳು ಕುಸಿಯುತ್ತಿವೆ. ಸೂಕ್ತ ಪರಿಹಾರ ಸಿಗುವಂತಾಗಬೇಕು. ವೆಂಕಪ್ಪ, ಕಟ್ಟಡ ಕಾರ್ಮಿಕ, ಬಜೆಗುಂಡಿ.
**
ಮಳೆಗಾಲದಲ್ಲಿ ಮನೆಯೊಳಗೆ ವಾಸಿಸಲು ಸಾಧ್ಯವಾಗುವುದಿಲ್ಲ. ರಸ್ತೆ ನೀರು ಮನೆಗೆ ನುಗ್ಗುತ್ತದೆ. ಮನೆ ಗೋಡೆಗಳು ಶಿಥಿಲಗೊಂಡಿವೆ. ಬರೆ ಕುಸಿದಂತೆ ತಡೆಗೋಡೆ ನಿರ್ಮಿಸಬೇಕು. ಅನಾಹುತ ಸಂಭಸುವ ಮೊದಲು ಸರ್ಕಾರ ಶೇಷ ಅನುದಾನ ನೀಡಿ, ಬಜೆಗುಂಡಿಯನ್ನು ಅಭಿವೃದ್ದಿ ಪಡಿಸಬೇಕು. ವಿಶಾಲಾಕ್ಷಿ, ಗೃಹಿಣಿ, ಬಜೆಗುಂಡಿ.
**
ಮಳೆಗಾಲದಲ್ಲಿ ಮನೆ ಶೀಟ್ ಹಾರಿ ಹೋಗಿ ೩ ತಿಂಗಳು ಕಳೆದಿವೆ. ಇದುವರೆಗೆ ಪರಿಹಾರ ಸಿಕ್ಕಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಒ ಬಂದು ಬರೆದುಕೊಂಡು ಹೋಗಿದ್ದಾರೆ. ಈಗ ಕೇಳಿದರೆ ಫಂಡ್ ಇಲ್ಲ ಎನ್ನುತ್ತಿದ್ದಾರೆ. ಬಡವರನ್ನು ಕಂಡರೆ ಜಿಲ್ಲಾಡಳಿತಕ್ಕೂ ತಾತ್ಸಾರ. ಇನ್ನು ಕಾಲನಿಯೊಳಗೆ ಅಕ್ರಮವಾಗಿ ಮದ್ಯ ಮಾರಾಟದಿಂದ ಅನೇಕರು ವ್ಯಸನಿಗಳಾಗಿದ್ದಾರೆ. ಹೋರಾಟ ಮಾಡಿದರೂ ಕ್ರಮ ತೆಗೆದು ಕೊಳ್ಳುತ್ತಿಲ್ಲ. ಅಬ್ಬಾಸ್, ಆಟೋ ಚಾಲಕ, ಬಜೆಗುಂಡಿ ನಿವಾಸಿ.
**
ಕಸವಿಲೇವಾರಿ ಘಟಕ ನಿರ್ಮಾಣ ಕೆಲಸ ಗುತ್ತಿಗೆದಾರರು ಮಾಡಬೇಕು. ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಎಇಇ ಅವರಿಗೆ ಹೇಳಿದ್ದೇವೆ. ಆದರೂ ಕಾಮಗಾರಿ ವಿಳಂಬವಾಗುತ್ತಿದೆ. ಕಸವಿಲೇವಾರಿ ಸಮಸ್ಯೆ ದೊಡ್ಡದಿದೆ. ಬಜೆಗುಂಡಿ ಕಾಲನಿಯ ವಿದ್ಯುತ್ ಮಾರ್ಗ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು. ಅಂಜನಾದೇವಿ, ಪಿ.ಡಿ.ಒ, ಬೇಳೂರು ಪಂಚಾಯಿತಿ.