ಮುದ್ರಣ ಮತ್ತು ಪ್ರಕಾಶನಾಲಯಕ್ಕೆ ಸೋಮಶೇಖರ್ ಅಧ್ಯಕ್ಷ: ಅವಿರೋಧ ಆಯ್ಕೆ ಘೋಷಣೆ

Somashekhar elected as President of Printing and Publishing Mandya
Published on

ಮಂಡ್ಯ: ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಅಧ್ಯಕ್ಷರಾಗಿ ಬೇಲೂರು ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾದರು.

ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತ್ಯಂತ ಹಳೇಯದಾದ ಮುದ್ರಣ ಸಹಕಾರಿ ಸಂಸ್ಥೆಯಾಗಿದೆ. ಇಂತಹ ಪ್ರತಿಷ್ಠಿತ ಸಹಕಾರಿ ಸಂಸ್ಥೆಗೆ ಅಧ್ಯಕ್ಷ ಸ್ಥಾನ ಎಲ್ಲರ ಸಹಕಾರದಿಂದ ಸಿಕ್ಕಿದೆ. ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ದಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ನಿರ್ದೇಶಕರಾದ ಕುಮಾರ್, ರಾಜನಾಯಕ, ಎಸ್.ನಾಗೇಂದ್ರ, ಗುರುಸ್ವಾಮಿ, ಪುರುಷೋತ್ತಮ್, ಶಶಿಧರ್ ಸಂಗಾಪುರ, ಸುಗ್ಗಿ ಕೆಂಚಪ್ಪ, ಎಂ.ಡಿ.ಪ್ರಕಾಶ್, ದೇವರಾಜು, ದಾಸೇಗೌಡ, ಕೆ.ಜೆ.ದೇವರಾಜು, ಆರ್.ಕೆ.ಶ್ರೀಮತಿ, ಟಿ.ಬಿ.ಚೈತ್ರಾ, ಕೊಂಡಯ್ಯ, ನಂದೀಶ್, ದೀಪಕ್, ಹರೀಶ್, ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮರೀಗೌಡ, ಹೊಸಹಳ್ಳಿ ಶಿವಲಿಂಗೇಗೌಡ, ಬೋರೇಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net