ಸೋಮಸಮುದ್ರ ಗ್ರಾಪಂಗೆ ಅಧ್ಯಕ್ಷೆ-ಉಪಾಧ್ಯಕ್ಷ ಆಯ್ಕೆ

kurgodu
ಸೋಮಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ-ಉಪಾಧ್ಯಕ್ಷರಾಗಿ ಆಯ್ಕೆಯಾದ ಎನ್.ಶಾರದಾ ಪವಾಡಿ ರಮೇಶ ಮತ್ತು ವಿ.ಗಂಗಾಧರ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪವಾಡಿ ಮಲ್ಲಪ್ಪ, ಎಂ.ಮಂಜುನಾಥ, ಎಸ್.ಪುಲ್ಲಯ್ಯ, ಎನ್.ದ್ಯಾವಣ್ಣ, ದರೂರ ರಾಜ, ಕೆಂಚಮಾಳಪ್ಪ, ವಿ.ಎನ್.ಮಲ್ಲಿಕಪ್ಪ, ಶರಣಬಸವನಗೌಡ, ಸಿದ್ದರಾಮ, ನಾಗರೆಡ್ಡಿ, ಜಂಬುನಾಥ, ಕೆ.ಮಹೇಶ ಇತರರಿದ್ದರು.
Published on

ಕುರುಗೋಡು: ತಾಲೂಕಿನ ಸೋಮಸಮುದ್ರ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಬುಧವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಎನ್.ಶಾರದಾ ಪವಾಡಿ ರಮೇಶ್ ಹಾಗೂ ವಿ.ಗಂಗಾಧರ ಆಯ್ಕೆಯಾದರು.


ಅಧ್ಯಕ್ಷ (ಸಾಮಾನ್ಯ ಮಹಿಳೆ) ಸ್ಥಾನಕ್ಕೆ ಸ್ಪರ್ಧಿಸಿದ ಶಾರದಾ ಪವಾಡಿ 12 ಮತ ಪಡೆದು ಜಯಗಲಿಸಿದರೆ ಹಾಗೂ ರಾಜೇಶ್ವರಿ ಸಿದ್ದಪ್ಪ ಎಂಟು ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನ (ಎಸ್ಸಿಗೆ)ಕ್ಕೆ 13 ಮತ ಪಡೆದ ವಿ.ಗಂಗಾಧರ ಗೆದ್ದರೆ, ಎದುರಾಳಿ ಲಕ್ಷ್ಮೀ ರಾಘವೇಂದ್ರ 7 ಮತ ಪಡೆದು ಸೋತರು ಎಂದು ಚುನಾವಣಾಧಿಕಾರಿ ವಸಂತ್ ಘೋಷಿಸಿದರು. ಎಲ್ಲ 20 ಸದಸ್ಯರು ಹಾಜರಿದ್ದರು.


ಪಿಡಿಒ ಸಿದ್ದಲಿಂಗಪ್ಪ , ಪವಾಡಿ ಮಲ್ಲಪ್ಪ, ಎಂ.ಮಂಜುನಾಥ, ಎಸ್.ಪುಲ್ಲಯ್ಯ, ಎನ್.ದ್ಯಾವಣ್ಣ, ದರೂರ ರಾಜ, ಕೆಂಚಮಾಳಪ್ಪ, ವಿ.ಎನ್.ಮಲ್ಲಿಕಪ್ಪ, ಶರಣಬಸವನಗೌಡ, ಸಿದ್ದರಾಮ, ನಾಗರೆಡ್ಡಿ, ಜಂಬುನಾಥ, ಕೆ.ಮಹೇಶ, ಪವಾಡಿ ಚಿದಾನಂದ, ಶ್ರೀನಿವಾಸ, ಮಧು, ಗುಳೆಪ್ಪನವರ ಮಲ್ಲಿ, ಪಂಚಣ್ಣ, ಗ್ರಾಪಂ ಸದಸ್ಯರಾದ ಎಂ.ಮಜುನಾಥ, ಗಾದಿಲಿಂಗಗೌಡ, ರುದ್ರಪ್ಪ, ಜಡೆಪ್ಪ, ಸಿದ್ದಲಿಂಗಮ್ಮ, ವಿ.ಲಕ್ಷ್ಮೀ, ಮಹಾಂತೇಶ, ಮದಿರೆ ಕೊಮಾರೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net