

ಕಂಪ್ಲಿ: ಇಲ್ಲಿನ ವಾಲ್ಮೀಕಿ ವೃತ್ತ ಬಳಿ 20ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಗುರುವಾರ ಚಾಲನೆ ನೀಡಿದರು.
ಇದನ್ನೂ ಓದಿ: ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಕಂಬಳಿ ಹುಳಗಳ ಕಾಟ
ನಂತರ ಮಾತನಾಡಿ, ಬಹು ವರ್ಷಗಳ ಬೇಡಿಕೆಯಂತೆ ವಾಲ್ಮೀಕಿ ವೃತ್ತದಿಂದ ರಾಮಸಾಗರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಸೋಮಪ್ಪ ಕೆರೆ ಅಭಿವೃದ್ಧಿಗೆ ಹೆಚ್ಚುವರಿ ಎರಡು ಕೋಟಿ ರೂ.ಮಂಜೂರಾಗಿದೆ.
ಪಟ್ಟಣದ ರಸ್ತೆ ಅಭಿವೃದ್ಧಿಗಾಗಿಯೇ 40ಕೋಟಿ ರೂ.ಗಳಷ್ಟು ಹಣ ಮಂಜೂರಾಗಿದೆ. ರೈತರು ರಸ್ತೆಯ ಮೇಲೆ ಟ್ರ್ಯಾಕ್ಟರ್‌ಗಳಿಗೆ ವೀಲ್ ಪಟ್ಲರ್ ಅಳವಡಿಸಿ ಚಲಾಯಿಸಬಾರದು. ಕ್ಷೇತ್ರದಲ್ಲಿನ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನ ನಡೆಸಿದ್ದೇನೆ ಎಂದರು.
ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಭಟ್ಟ ಪ್ರಸಾದ್, ಕೆ.ಎಸ್.ಚಾಂದ್‌ಬಾಷ, ವೀರಾಂಜನೇಯಲು, ಕೆ.ಮಸ್ತಾನ್‌ಸಾಬ್, ಡಾ.ಎ.ಸಿ.ದಾನಪ್ಪ, ಕಲ್ಗುಡಿ ವಿಜಯಕುಮಾರ್, ಡಿ.ಮೌನೇಶ, ಹೊನ್ನಳ್ಳಿ ಶ್ರೀದೇವಿ, ಬಳೆ ಮಲ್ಲಿಕಾರ್ಜುನ, ಬಿ.ಜಾಫರ್, ಅಬ್ದುಲ್ ವಾಹೀದ್, ಸತ್ಯಪ್ಪ ಆಟೋ ರಾಘವೇಂದ್ರ, ಕನಕಗಿರಿ ರೇಣುಕಪ್ಪ ಇತರರಿದ್ದರು.